ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಪ್ರಯೋಗ

Update: 2022-01-11 17:38 GMT

ಹೊಸದಿಲ್ಲಿ, ಜ. 11: ಸುಧಾರಿತ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ವಾಯು ಪಡೆ ಭಾರತೀಯ ನೌಕಾ ಪಡೆಯ ಹೊಂಚುದಾಳಿ ನಿರ್ದೇಶಿತ ಕ್ಷಿಪಣಿ ವಿಧ್ವಂಸಕದಿಂದ ಭಾರತ ಮಂಗಳವಾರ ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ.

ಈ ಕ್ಷಿಪಣಿ ನಿಯೋಜಿತ ಗುರಿಯನ್ನು ನಿಖರವಾಗಿ ಹೊಡೆದಿದೆ ಎಂದು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹೇಳಿದೆ.

ಸಮುದ್ರದಿಂದ ಸಮುದ್ರಕ್ಕೆ ನೆಗೆಯುವ ಸುಧಾರಿತ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಐಎನ್‌ಎಸ್ ವಿಶಾಖಪಟ್ಟಣಂನಿಂದ ಇಂದು ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು. ಕ್ಷಿಪಣಿ ನಿಯೋಜಿತ ಗುರಿಯಾಗಿರುವ ಹಡಗನ್ನು ಹೊಡೆದಿದೆ ಎಂದು ಡಿಆರ್‌ಡಿಒ ಟ್ವೀಟ್ ಮಾಡಿದೆ.

  ಕ್ಷಿಪಣಿಯ ಯಶಸ್ವಿ ಪ್ರಯೋಗ ಭಾರತೀಯ ನೌಕಾ ಪಡೆಯ ‘ಯೋಜನಾ ಸಿದ್ಧತೆ’ಯ ಸಾಮರ್ಥ್ಯವನ್ನು ಮರು ದೃಢೀಕರಿಸಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಅಲ್ಲದೆ, ಅವರು ಭಾರತೀಯ ನೌಕಾ ಪಡೆ ಹಾಗೂ ಡಿಆರ್‌ಡಿಒ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಭಾರತ-ರಶ್ಯಾದ ಜಂಟಿ ಸಾಹಸೋದ್ಯಮ ಬ್ರಹ್ಮೋಸ್ ಏರೋಸ್ಪೇಸ್ ಈ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ನಿರ್ಮಿಸಿದೆ. ಇದನ್ನು ಜಲಾಂತರ್ಗಾಮಿ, ಹಡಗು, ವಿಮಾನ ಅಥವಾ ಭೂಮಿಯಿಂದ ಉಡಾಯಿಸಬಹುದು.

ಬ್ರಹ್ಮೋಸ್ ಕ್ಷಿಪಣಿ 2.8 ಮ್ಯಾಕ್ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದ್ದು, ಇದು ಶಬ್ದಕ್ಕಿಂತ ಮೂರು ಪಟ್ಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News