ಬಿಜೆಪಿ ಪಕ್ಷದಲ್ಲಿ ಕ್ರಿಮಿನಲ್‌ ಗಳಿಗೆ ಯಾವುದೇ ಅವಕಾಶವಿಲ್ಲ ಮತ್ತು ಆಶ್ರಯ ನೀಡುವುದಿಲ್ಲ: ಕೆ. ಅಣ್ಣಾಮಲೈ

Update: 2022-01-14 13:04 GMT

ಚೆನ್ನೈ: ಪಕ್ಷದಲ್ಲಿ ಅಪರಾಧಿಗಳಿಗೆ ಅವಕಾಶವಿಲ್ಲ ಅಥವಾ ಅವರಿಗೆ ಆಶ್ರಯ ನೀಡುವುದಿಲ್ಲ ಎಂದು ತಮಿಳುನಾಡು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಬುಧವಾರ ಹೇಳಿದ್ದಾರೆ.

“ನಾವು ಈ ಹಿಂದೆ ಅನೇಕ ಪ್ರದೇಶಗಳಲ್ಲಿ ಇದನ್ನು ಹೇಳಿದ್ದೇವೆ ಹಾಗೂ  ಈಗ ನಾನು ಅದನ್ನು ಪುನರುಚ್ಚರಿಸುತ್ತಿದ್ದೇನೆ. ಪೊಲೀಸರು ಯಾರನ್ನು ಹುಡುಕುತ್ತಾರೋ ಆ ಕ್ರಿಮಿನಲ್ಗಳಿಗೆ ಬಿಜೆಪಿ ಆಶ್ರಯ ನೀಡುವುದಿಲ್ಲ'' ಎಂದು ಹೇಳಿದರು.

ಬಿಜೆಪಿಯ ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ಹಿಸ್ಟರಿ ಶೀಟರ್ ಪಡಪ್ಪೈ ಗುಣ ಅವರ ಕುಟುಂಬವನ್ನು ಇತ್ತೀಚೆಗೆ ಭೇಟಿಯಾದ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರು ಈ ಹೇಳಿಕೆ ನೀಡಿದ್ದಾರೆ. ಆ ಭೇಟಿಯ ಬಗ್ಗೆ ಹಿರಿಯ ನಾಯಕರನ್ನು ಕೇಳುವುದಾಗಿ ಅಣ್ಣಾಮಲೈ ಹೇಳಿದರು.

"ನಾನು ಅದರ ಬಗ್ಗೆ ತಿಳಿದುಕೊಂಡೆ. ಹಲವು ಮಾಧ್ಯಮಗಳೂ ಈ ಬಗ್ಗೆ ಬರೆದಿವೆ. ಅವರು (ರಾಧಾಕೃಷ್ಣನ್) ಕೇಂದ್ರ ಸಚಿವರಾಗಿದ್ದವರು. ಅವರಿಗೆ ನಿಯಮಗಳು ಮತ್ತು ನಿಬಂಧನೆಗಳು ತಿಳಿದಿವೆ. ಆದ್ದರಿಂದ ಕ್ರಿಮಿನಲ್  ವ್ಯಕ್ತಿಯನ್ನು ಪಕ್ಷಕ್ಕೆ ಸೇರಿಸುವುದು ಅವರ ಉದ್ದೇಶವಾಗಿರಲಿಲ್ಲ" ಎಂದು ಅಣ್ಣಾಮಲೈ ಚೆನ್ನೈನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಭೇಟಿಯ ಬಗ್ಗೆ ತನಗೆ ಮಾಹಿತಿ ಇರಲಿಲ್ಲ ಹಾಗೂ  ಪ್ರತಿದಿನ ಯಾರು ಯಾರನ್ನು ಭೇಟಿಯಾಗುತ್ತಿದ್ದಾರೆ ಎಂಬುದರ ಕುರಿತು ಟ್ಯಾಬ್ ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News