ಸಾರ್ವಜನಿಕ ಹಿತ ಕಾಣದ ಮೇಕೆದಾಟು ಯೋಜನೆ: ಮೇಧಾ ಪಾಟ್ಕರ್

Update: 2022-01-14 15:42 GMT

ಬೆಂಗಳೂರು, ಜ.14: ಪ್ರಸ್ತುತ ದಿನಗಳಲ್ಲಿ ಅಣೆಕಟ್ಟು, ಕೈಗಾರಿಕೆಯಂತಹ ಮಾನವನ ಚಟುವಟಿಕೆಗಳಿಂದ ಪ್ರಕೃತಿದತ್ತ ನದಿಗಳು ಅವನತಿಯತ್ತ ಸಾಗುತ್ತಿವೆ. ರಾಜಕೀಯ ಪ್ರೇರಿತ ಮೇಕೆದಾಟು ಯೋಜನೆಯು ಇದಕ್ಕೆ ಹೊರತೇನು ಅಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ಹಾಗೂ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ವಿವರಿಸಿದರು. 

ಶುಕ್ರವಾರ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಮೇಕೆದಾಟು ಪರಿಸರದ ಪರ, ಯೋಜನೆ ವಿರುದ್ಧದ ಕುರಿತು ನಡೆದ ಸಂವಾದದಲ್ಲಿ ಮಾತನಾಡಿದ ಅವರು, ದಿನನಿತ್ಯ ವಿಷಮಿಶ್ರಿತ ವಸ್ತುಗಳು ಹೊರಬರುವ ಕಾರಣ ನದಿಗಳು ನಿಜವಾದ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆಲ್ಲಾ ಕೃತಕ ಚಟುವಟಿಕೆಗಳಾದ ಅಣೆಕಟ್ಟು, ಕೈಗಾರಿಕೋದ್ಯಮ ಹಾಗೂ ಮಿತಿ ಇಲ್ಲದ ಮಾನವನ ದುರಾಸೆಯೆ ಕಾರಣವಾಗಿದೆ. 

ಇದಲ್ಲದೆ, ರಾಜಕಾರಣಿಗಳು ನದಿಗಳನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ನದಿಯನ್ನು ಅವಲಂಬಿಸಿರುವ ಜೀವಸಂಕುಲಗಳು ನಾಶವಾಗುತ್ತವೆ. ಮೇಕೆದಾಟು ಯೋಜನೆಯಲ್ಲಿಯೂ ಇಂತಹದ್ದೆ ರಾಜಕಾರಣ ಕಾಣುತ್ತಿದೆಯೇ ಹೊರತು ಸಾರ್ವಜನಿಕರ ಉಪಯೋಗವಾಗುವಂತಹ ಯಾವುದೇ ಕಾರಣವೂ ಕಾಣುತ್ತಿಲ್ಲ. ಜನರು ಇದರ ವಿರುದ್ಧ ಧ್ವನಿ ಎತ್ತಿ ಮಾತನಾಡಬೇಕು ಎಂದರು. 
 
ನಟ ಚೇತನ್ ಮಾತನಾಡಿ, ರಾಜಕೀಯ ಪ್ರೇರಿತ ಮೇಕೆದಾಟು ಯೋಜನೆ ನೆಪದಲ್ಲಿ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಯನ್ನು ಹೊಂದಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ರಾಜಕೀಯ ನಾಯಕರು ಪ್ರಕೃತಿಯನ್ನು ಕಡೆಗಣಿಸಿ, ಜನತೆಯನ್ನು ದಾರಿ ತಪ್ಪಿಸುತ್ತಿz್ದÁರೆ. ಅಣೆಕಟ್ಟನ್ನು ಕಟ್ಟಿದರೆ, ಸಹಸ್ರಾರು ಜೀವರಾಶಿಗಳ ನಾಶಕ್ಕೆ ಕಾರಣವಾಗಬಲ್ಲದು. ಹಾಗಾಗಿ ಸರಕಾರವು ಅಣೆಕಟ್ಟು ಕಟ್ಟಲು ಮುಂದಾದರೆ, ಅದನ್ನು ಖಂಡಿಸಿ, ರಾಜ್ಯಾದ್ಯಂತ ಬೃಹತ್ ಹೋರಾಟವನ್ನು ಮಾಡಲಿದ್ದೇವೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. 

ಮಾಜಿ ಸಚಿವೆ ಬಿ.ಟಿ.ಲಲಿತನಾಯಕ್ ಮಾತನಾಡಿ, ಮೇಕೆದಾಟು ವಿಚಾರದಲ್ಲಿ ಪರಿಸರವನ್ನು ಕಾಪಾಡಲು ಪ್ರಯತ್ನಿಸುತ್ತಿz್ದÉೀವೆ ಹೊರತು, ಯಾವುದೇ ಪಕ್ಷದ ವಿರುದ್ಧ ಮಾತನಾಡುತ್ತಿಲ್ಲ. ಪ್ರಕೃತಿಯನ್ನು ನಮಗಾಗಿ ಅಲ್ಲದಿದ್ದರೂ, ನಮ್ಮ ಮುಂದಿನ ತಲೆ ಮಾರಿನವರಿಗಾಗಿ ರಕ್ಷಿಸಿ ಕೊಡಬೇಕು ಎಂದು ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ, ಚಿತ್ರನಿರ್ದೇಶಕಿ ಕವಿತಾ ಲಂಕೇಶ್, ಹ.ರಾ. ಮಹೇಶ್, ಅಮರ್‍ಕುಮಾರ್, ಕೃಷ್ಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News