​ರಾಜ್ಯಮಟ್ಟದ ಬ್ಯೂಟಿಪಾರ್ಲರ್ ಅಸೋಸಿಯೇಶನ್ ಅಸ್ತಿತ್ವಕ್ಕೆ

Update: 2022-01-14 16:54 GMT

ಉಡುಪಿ: ಉಡುಪಿ ಜಿಲ್ಲೆಯಲ್ಲಿ ರಾಜ್ಯಮಟ್ಟದ ಬ್ಯೂಟಿಪಾಲರ್ ಅಸೋಸಿಯೇಶನ್ ‘ಕರ್ನಾಟಕ ಐಕ್ಯ ಪಾರ್ಲರ್ ಮತ್ತು ಕ್ಷೌರಿಕ ಬ್ಯೂಟಿಪಾರ್ಲರ್ ಅಸೋಸಿಯೇಷನ್’ನ್ನು ಪ್ರಾರಂಭಿಸಿದ್ದೇವೆ ಎಂದು ಕರ್ನಾಟಕ ಐಕ್ಯ ಪಾರ್ಲರ್ ಅಧ್ಯಕ್ಷೆ ಪೌಲಿನ್ ಕ್ರಾಸ್ತಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸರಕಾರ ಬ್ಯೂಟಿಪಾರ್ಲರ್‌ನ ಮಹಿಳೆಯರಿಗೆ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಘಟನೆಯನ್ನು ಬಲಪಡಿಸುತ್ತಿದ್ದೇವೆ. ಈಗಾಗಲೇ 200 ಕ್ಕೂ ಹೆಚ್ಚು ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು, ಕಾರವಾರ ಜಿಲ್ಲೆಗಳಲ್ಲಿ ಸದಸ್ಯರು ಸೇರ್ಪಡೆಯಾಗುತ್ತಿದ್ದಾರೆ ಎಂದವರು ವಿವರಿಸಿದರು.

ಸರಕಾರದ ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮತ್ತು ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ನಮ್ಮ ಬ್ಯೂಟಿಪಾರ್ಲರ್‌ನವರಿಗೆ 6 ತಿಂಗಳು ಬಡ್ಡಿ ರಹಿತ ಸಾಲ, ಹೌಸಿಂಗ್ ಲೋನ್, ವಾಹನ ಸಾಲ ಇತರ ಎಲ್ಲಾ ಸಾಲಸೌಲಭ್ಯಗಳನ್ನು ನೀಡುತ್ತಿದ್ದಾರೆ. ಮುಂದೆ ಆರೋಗ್ಯ ಮಾಹಿತಿ ಶಿಬಿರ, ಸೌಂದರ್ಯವರ್ಧಕ ತರಬೇತಿಗಳನ್ನು ನಡೆಸು ವುದು, ಕಾನೂನು ಮಾಹಿತಿ ಶಿಬಿರ ನಡೆಸುವ ಉದ್ದೇಶ ನಮ್ಮದಾಗಿದೆ ಎಂದರು.
ಹಳ್ಳಿಗಳಲ್ಲಿರುವ ಬ್ಯೂಟಿಷಿಯನ್ನರನ್ನು ಒಟ್ಟುಗೂಡಿಸಿ ಅವರಿಗೆ ವಿವಿಧ ರೀತಿಯ ತರಬೇತಿಗಳನ್ನು ಮುಂದಿನ ದಿನಗಳಲ್ಲಿ ನೀಡುವಲ್ಲಿ ಕಾರ್ಯ ಪ್ರವೃತ್ತರಾಗುತ್ತೇವೆ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಲತಿಸಿಯಾ ಡಾಂಟಿಸ್, ಸುಮನಾ ಭಂಡಾರಿ, ಅರುಣಾಕ್ಷಿ ,ಮಂಜುಳಾ ಡಿ ನಾಯಕ, ಗೀತಾ ಭಂಡಾರಿ, ಸುರಯಾ, ವನಿತಾ ರಾವ್, ಪೂರ್ಣಿಮಾ, ಲತಾಹರೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News