ಶಿರ್ವ ಇಂಟರ್ಯಾಕ್ಟ್ ಕ್ಲಬ್‌ಗೆ ಮಾನ್ಯತಾ ಪತ್ರ ಹಸ್ತಾಂತರ

Update: 2022-01-17 12:32 GMT

ಶಿರ್ವ, ಜ.17: ಶಿರ್ವ ರೋಟರಿಯಿಂದ ಪ್ರವರ್ತಿಸಲ್ಪಟ್ಟ ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ನೂತನ ಇಂಟರ್ಯಾಕ್ಟ್ ಕ್ಲಬ್‌ಗೆ ಅಂತಾರಾಷ್ಟ್ರೀಯ ರೋಟರಿಯಿಂದ ಬಂದ ಮಾನ್ಯತಾ ಪತ್ರವನ್ನು ಶಿರ್ವ ರೋಟರಿ ಅಧ್ಯಕ್ಷ, ನ್ಯಾಯವಾದಿ ಜಯಕೃಷ್ಣ ಆಳ್ವ ಶುಕ್ರವಾರ ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.

ಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ನೂತನ ಇಂಟರ್ಯಾಕ್ಟ್ ಅಧ್ಯಕ್ಷೆ ಸ್ಪೂರ್ತಿ, ಕಾರ್ಯದರ್ಶಿ ಸುಮಿತ್ ಬಳಗದ ಪದಗ್ರಹಣ ನೆರವೇರಿಸಲಾಯಿತು. ವಿದ್ಯಾರ್ಥಿ ಹಂತದಲ್ಲೇ ಸಮರ್ಥ ನಾಯಕತ್ವ, ಸೇವಾ ಮನೋಭಾವನೆ, ಉತ್ತಮ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳುವಲ್ಲಿ ಇಂಟರ್ಯಾಕ್ಟ್ ಉತ್ತಮ ವೇದಿಕೆಯಾಗಿದೆ ಎಂದು ಜಯಕೃಷ್ಣ ಆಳ್ವ ತಿಳಿಸಿದರು.

ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3182 ಇದರ ವೊಕೇಶನಲ್ ಅವಾರ್ಡ್ ಸಮಿತಿ ಜಿಲ್ಲಾಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿದರು. ಪ್ರೌಢ ಶಾಲಾ ಮುಖ್ಯಸ್ಥೆ ವಸಂತಿ, ರೋಟರಿ ಕಾರ್ಯದರ್ಶಿ ಜಿನೇಶ್ ಬಲ್ಲಾಳ್, ಇಂಟರ್ಯಾಕ್ಟ್ ಸಭಾಪತಿ ಹೊನ್ನಯ್ಯ ಶೆಟ್ಟಿಗಾರ್, ಶಿಕ್ಷಕ ಕೊರ್ಡಿನೇಟರ್ ಕೇಶವ, ರೋಟರಿ ನಿಯೋಜಿತ ಅಧ್ಯಕ್ಷ ಪ್ರೊ.ವಿಠಲ್ ನಾಯಕ್, ಪೂರ್ವಾಧ್ಯಕ್ಷರುಗಳಾದ ಮೆಲ್ವಿನ್ ಡಿಸೋಜ, ವಿಷ್ಣುಮೂರ್ತಿ ಸರಳಾಯ ಉಪಸ್ಥಿತರಿದ್ದರು. ಇಂಟರ್ಯಾಕ್ಟ್ ಕರ್ಯದರ್ಶಿ ಸುಮಿತ್ ವಂದಿಸಿದರು. ಶಿಕ್ಷಕಿಯರಾದ ಸುಪ್ರೀತಾ ಶೆಟ್ಟಿ ನಿೂಪಿಸಿದರು. ವೀಣಾ ಸಹಕರಿಸಿದರು.

ಇಂಟರ್ಯಾಕ್ಟ್ ಕರ್ಯದರ್ಶಿ ಸುಮಿತ್ ವಂದಿಸಿದರು. ಶಿಕ್ಷಕಿಯರಾದ ಸುಪ್ರೀತಾ ಶೆಟ್ಟಿ ನಿರೂಪಿಸಿದರು. ವೀಣಾ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News