ಬೆಂಗಳೂರು: ಆಧ್ಯಾತ್ಮಿಕ ಪ್ರಭಾವಕ್ಕೆ ಒಳಗಾಗಿ ನಾಪತ್ತೆಯಾಗಿದ್ದ ಬಾಲಕಿ 79 ದಿನಗಳ ಬಳಿಕ ಪತ್ತೆ

Update: 2022-01-18 12:34 GMT

ಬೆಂಗಳೂರು, ಜ.18: ಆಧ್ಯಾತ್ಮಿಕ ಪ್ರಭಾವಕ್ಕೆ ಒಳಗಾಗಿ ನಾಪತ್ತೆಯಾಗಿದ್ದ ಬಾಲಕಿ 79 ದಿನಗಳ ಬಳಿಕ ಗುಜರಾತಿನ ಆಶ್ರಮವೊಂದರಲ್ಲಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಗುಜರಾತಿನ ಸೂರತ್ ಆಶ್ರಮವೊಂದರಲ್ಲಿ ತಂಗಿದ್ದ ಬಾಲಕಿಯನ್ನು ಸುಬ್ರಹ್ಮಣ್ಯನಗರ ಠಾಣಾ ಪೊಲೀಸರು ಪತ್ತೆಹಚ್ಚಿ ಪೋಷಕರ ಮಡಿಲಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡು ತಿಂಗಳ ಹಿಂದೆ ಬಾಲಕಿ ತಾನು ಆತ್ಮಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ಪೋಷಕರು ದೂರು ನೀಡಿದ್ದರು.

ಈ ಸಂಬಂಧ ಕಾರ್ಯಾಚರಣೆ ನಡೆಸಿದ ಸುಬ್ರಹ್ಮಣ್ಯನಗರ ಠಾಣಾ ಪೊಲೀಸರು, ಬಾಲಕಿಯ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಈ ವೇಳೆ, ಸಿಕ್ಕ ಸಿಸಿಟಿವಿ ದೃಶ್ಯ ಆಧರಿಸಿ ಆಕೆಯನ್ನು ಅಪಹರಣ ಮಾಡಿರುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು.

ಬಳಿಕ ಸಾಮಾಜಿಕ ಜಾಲತಾಣ ಹಾಗೂ ಪೊಲೀಸರ ತನಿಖೆಯಿಂದ ಅ.31ಕ್ಕೆ ಕಣ್ಮರೆಯಾದ ಬಾಲಕಿ ಜ.15ಕ್ಕೆ ಗುಜರಾತಿನ ಸೂರತ್‌ನಲ್ಲಿನ ಆಶ್ರಮವೊಂದರಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ಕರೆತಂದು ಮಕ್ಕಳ ಕೇರ್ ಸೆಂಟರ್‌ಗೆ ನೀಡಲಾಗಿತ್ತು. ಇದೀಗ ಪೊಲೀಸರು ಪೋಷಕರ ಮಡಿಲಿಗೆ ಬಾಲಕಿಯನ್ನು ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News