ದ.ಕ.ಜಿಲ್ಲೆ: 1058 ಮಂದಿಗೆ ಕೋವಿಡ್ ಪಾಸಿಟಿವ್

Update: 2022-01-18 14:42 GMT

ಮಂಗಳೂರು, ಜ.18: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ ಪಾಸಿಟಿವ್ ಪ್ರಕರಣ ಸಾವಿರದ ಗಡಿ ದಾಟಿದೆ. ತಿಂಗಳ ಹಿಂದೆ ಐವತ್ತರ ಗಡಿಯೊಳಗಿದ್ದ ಪ್ರಕರಣಗಳು ಬಳಿಕ ಹಂತ ಹಂತವಾಗಿ ಏರಿಕೆಯಾಗುತ್ತಲೇ ಬಂದಿದ್ದು, ಮಂಗಳವಾರ ಪತ್ತೆಯಾದ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1058ಕ್ಕೇರಿದೆ. ಮೈಸೂರಿನಲ್ಲಿ 1848 ಆಗಿದ್ದರೆ, ಹಾಸನದಲ್ಲಿ 1739ಕ್ಕೇರಿದೆ.

ಉಳಿದಂತೆ ಮಂಗಳವಾರ 275 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಪಾಸಿಟಿವ್ ದರ ಶೇ.10.76 ದಾಖಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 1,23,305 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಸೋಂಕಿತರ ಪೈಕಿ ಒಟ್ಟು 1,16,630 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 1,711 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಸದ್ಯ 4,964 ಸಕ್ರಿಯ ಪ್ರಕರಣವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News