×
Ad

ಪುತ್ತೂರು: ಮನೆ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

Update: 2024-05-03 13:45 IST

ಪುತ್ತೂರು, ಮೇ 3: ಮನೆಯೊಂದರ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾದ ಘಟನೆ ಗುರುವಾರ ರಾತ್ರಿ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ಎಂಬಲ್ಲಿ ನಡೆದಿದೆ.

ಗುಮ್ಮಟೆಗದ್ದೆ ಸೂರಪ್ಪ ಗೌಡ ಎಂಬವರ ಮನೆಗೆ ಕಲ್ಲು ತೂರಾಟ ನಡೆದಿದೆ. ರಾತ್ರಿ ಸುಮಾರು 8:30ರ ವೇಳೆಗೆ ಮನೆ ಮಂದಿ ಮನೆಯೊಳಗಡೆ ಇದ್ದ ಸಂದರ್ಭದಲ್ಲಿ ಕಲ್ಲು ಎಸೆಯಲಾಗಿದೆ. ಕಲ್ಲು ಮನೆ ಸಿಮೆಂಟ್ ಶೀಟ್ ಛಾವಣಿ ಮೇಲೆ ಬಿದ್ದ ಶಬ್ದ ಕೇಳಿ ಹೊರಗಡೆ ಬಂದಾಗ ಕಿಡಿಗೇಡಿಗಳು ಓಡಿ ಪರಾರಿಯಾಗಿದ್ದಾರೆ ಎಂದು ದೂರು ನೀಡಲಾಗಿದೆ.

ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News