ಒತ್ತುವರಿ ತಡೆಯಿರಿ, ಅಂಬೇಡ್ಕರ್ ಉದ್ಯಾನವನಕ್ಕೆ ಮೀಸಲಿಡಿ: ಎನ್.ವೆಂಕಟೇಶ್ ಆಗ್ರಹ

Update: 2022-01-18 16:21 GMT

ಬೆಂಗಳೂರು, ಜ.18: ಸರಕಾರಿ ಜಾಗವು ಖಾಸಗಿಯವರಿಂದ ಒತ್ತುವರಿಯಾಗುವುದನ್ನು ತಡೆದು, ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನವನಕ್ಕೆ ಮೀಸಲಿಡುವಂತೆ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ವಕ್ತಾರ ಎನ್.ವೆಂಕಟೇಶ್ ಆಗ್ರಹಿಸಿದ್ದಾರೆ. 

ನಗರದ ಕೆ.ಆರ್‍ಪುರಂ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿ ಮಾತನಾಡಿದ ಅವರು, ವರ್ತೂರು ಹೋಬಳಿಯ ರಾಮಗೊಂಡನಹಳ್ಳಿಯ ಸರ್ವೆ ನಂ.105ರಲ್ಲಿರುವ ಸರಕಾರಿ ಭೂಮಿಯನ್ನು ಖಾಸಗಿಯವವರು ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಹಾಗಾಗಿ ಅದಕ್ಕೆ ಅವಕಾಶ ಮಾಡಿಕೊಡದೆ ಗ್ರಾಮದ ಕ್ಷೇಮಾಭಿವೃದ್ಧಿಗಾಗಿ ಮೀಸಲಿಡಬೇಕು. ಸಂಘಕ್ಕೆ ಮತ್ತು ಉದ್ಯಾನವನ್ನ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಹಾಗೆಯೇ ಮುಳ್ಳೂರು, ಚನ್ನಸಂದ್ರ ಸೇರಿದಂತೆ ತಾಲ್ಲೂಕಿನಲ್ಲಿ ಸರಕಾರಿ ಜಾಗಗಳಿದ್ದು, ಅದನ್ನು ಬಡವರ ಕ್ಷೇಮಾಭಿವೃದ್ಧಿ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಸರಕಾರಿ ಭೂರಕ್ಷಣಾ ಸಮಿತಿ ಅಧ್ಯಕ್ಷ ವಿಜಕುಮಾರ್, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ವೇಣುಗೋಪಾಲ ಸೇರಿದಂತೆ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News