ಅಬುದಾಭಿ ಪ್ರವೇಶಿಸಲು ಬೂಸ್ಟರ್ ಡೋಸ್ ಕಡ್ಡಾಯ

Update: 2022-01-18 18:31 GMT
ಸಾಂದರ್ಭಿಕ ಚಿತ್ರ

 ದುಬೈ,ಜ.18: ವ್ಯಾಪಕವಾಗಿ ಹರಡುತ್ತಿರುವ ಒಮಿಕ್ರಾನ್ ಪ್ರಭೇದದ ವೈರಸ್‌ನ ಹಾವಳಿಯಿಂದ ಕೋವಿಡ್19 ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅಬುದಾಭಿ ನಗರವನ್ನು ಪ್ರವೇಶಿಸುವವರು ಅವರು ಬೂಸ್ಟರ್ ಡೋಸ್‌ಗಳನ್ನು ಪಡೆದಿರುವ ದಾಖಲೆಗಳನ್ನು ಪ್ರದರ್ಶಿಸಬೇಕೆಂದು ಆದೇಶ ಹೊರಡಿಸಲಾಗಿದೆ.

 ಈ ವಾರದ ಆರಂಭದಲ್ಲಿ ಯುಎಇ ಸರಕಾರದ ಆರೋಗ್ಯ ಆ್ಯಪ್‌ನಲ್ಲಿ ಪ್ರಕಟಿಸಲಾದ ಸೂಚನೆಯಲ್ಲಿ ಯುಎಇಯನ್ನು ಪ್ರವೇಶಿಸುವವರು ತಾವು ಲಸಿಕೀಕರಣಗೊಂಡಿರುವುದನ್ನು ದೃಢಪಡಿಸುವ ‘ಹಸಿರು ಪಾಸ್’ ಪ್ರದರ್ಶಿಸಬೇಕೆಂದು ತಿಳಿಸಲಾಗಿತ್ತು. ಅಲ್ಲದೆ ಎರಡನೇ ಡೋಸ್ ಪಡೆದ ಕನಿಷ್ಠ 6 ತಿಂಗಳುಗಳ ಬಳಿಕ ಬೂಸ್ಟರ್ ಡೋಸ್‌ಗಳನ್ನು ಪಡೆಯದೆ ಇದ್ದಲ್ಲಿ ಅವರನ್ನು ಸಂಪೂರ್ಣವಾಗಿ ಲಸಿಕೀಕರಣಗೊಂಡವರು ಎದು ಪರಿಗಣಿಸಲಾಗುವುದಿಲ್ಲವೆಂದು ಆರೋಗ್ಯದ ಆಪ್ ತಿಳಿಸಿದೆ.

  ಯುಎಇ ರಾಜಧಾನಿ ಅಬುದಾಭಿಯನ್ನು ಪ್ರವೇಶಿಸುವವರು ತಮ್ಮ ಹಸಿರು ಪಾಸ್‌ನ ಸಿಂಧುತ್ವವನ್ನು ಕಾಪಾಡಿಕೊಳ್ಳಬೇಕಾದರೆ ಅವರಿಗೆ ಕೋವಿಡ್19 ತಪಾಸಣೆಯಲ್ಲಿ ನೆಗೆಟಿವ್ ಬಂದಿರಬೇಕು.
 ತಲಾವಾರು ಲೆಕ್ಕಾಚಾರದಲ್ಲಿ ಯುಎಇ ಜಗತ್ತಿನಲ್ಲೇ ಅತ್ಯಧಿಕ ಸಂಖ್ಯೆಯ ಜನರು ಲಸಿಕೀಕರಣಗೊಂಡ ದೇಶವಾಗಿದೆ. ಯುಎಇ ಶೇ.90ರಷ್ಟು ಜನಸಂಖ್ಯೆಯನ್ನು ಈಗಾಗಲೇ ಸಂಪೂರ್ಣವಾಗಿ ಲಸಿಕೀಕರಣಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News