107 ವಿದ್ಯಾರ್ಥಿಗಳಿಗೆ ಕೊರೋನ ಸೋಂಕು: ಬೆಂಗಳೂರು ಪಿಇಎಸ್ ಕಾಲೇಜು ಬಂದ್

Update: 2022-01-20 02:44 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ಇಲ್ಲಿನ ಪಿಇಎಸ್ ಟ್ರಸ್ಟ್ ಕಾಲೇಜಿನ ಹಾಸ್ಟೆಲ್‌ನಲ್ಲಿ 107 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಈ ತಿಂಗಳ 23ರವರೆಗೆ ಕಾಲೇಜಿನಲ್ಲಿ ಎಲ್ಲ ಭೌತಿಕ ತರಗತಿಗಳನ್ನು ರದ್ದುಪಡಿಸಿ, ರಜೆ ಘೋಷಿಸಲಾಗಿದೆ.

ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಜನವರಿ 23ರವರೆಗೆ ತರಗತಿಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ. ಆದಾಗ್ಯೂ ಆನ್‌ಲೈನ್ ತರಗತಿಗಳು ನಡೆಯಲಿವೆ. ಕೆಲ ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ 300 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಗುರಿಪಡಿಸಿದಾಗ 107 ಮಂದಿಗೆ ಪಾಸಿಟಿವ್ ಫಲಿತಾಂಶ ಬಂತು ಎನ್ನಲಾಗಿದೆ.

ಇದರ ಜತೆಗೆ ಸಂಸ್ಥೆಯ ಕ್ರೀಡಾ ಸಂಕೀರ್ಣಕ್ಕೆ ಕೂಡಾ ಪ್ರವೇಶವನ್ನು ನಿರ್ಬಂಧಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ನೂರಾರು ಮಂದಿ ಈ ಕ್ರೀಡಾಂಗಣಕ್ಕೆ ಮುಂಜಾನೆ ಮತ್ತು ಸಂಜೆಯ ವಾಯುವಿಹಾರಕ್ಕೆ ಆಗಮಿಸುತ್ತಾರೆ. ಈ ಸಂಕೀರ್ಣದಲ್ಲಿ ಈಜುಕೊಳ, ಕ್ರಿಕೆಟ್ ಪಿಚ್ ಮತ್ತು ಬ್ಯಾಡ್ಮಿಂಟನ್ ತರಗತಿಗಳು ಮತ್ತು ಜಿಮ್ನೇಶಿಯಂ ನಡೆಯುತ್ತಿದೆ. ಇದೀಗ ಕ್ರೀಡಾಪಟುಗಳ ಸುರಕ್ಷತೆ ದೃಷ್ಟಿಯಿಂದ ಕ್ರೀಡಾ ಸಂಕೀರ್ಣ ಮುಚ್ಚಲಾಗಿದೆ.

ಜನವರಿ 24ರ ಬಳಿಕ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಸಲ್ಲಿಸಬೇಕು. ಸರ್ಕಾರ ಬಿಡುಗಡೆ ಮಾಡಿರುವ ಕೋವಿಡ್ ಮಾರ್ಗಸೂಚಿಯ ಪ್ರಕಾರ, ಕಾಲೇಜನ್ನು ಪ್ರತಿದಿನ ಸ್ಯಾನಿಟೈಸ್ ಮಾಡಬೇಕಿದೆ. ವಿದ್ಯಾರ್ಥಿಗಳನ್ನು ಮತ್ತು ಸಿಬ್ಬಂದಿಯನ್ನು ಸೋಂಕಿನಿಂದ ರಕ್ಷಿಸುವುದು ಸಂಸ್ಥೆಯ ಕರ್ತವ್ಯ ಎಂದು ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News