'ಬುಲ್ಲಿ ಬಾಯ್' ಆ್ಯಪ್ ಪ್ರಕರಣ: ಮತ್ತೊಬ್ಬ ಆರೋಪಿಯನ್ನು ಬಂಧಿಸಿದ ಮುಂಬೈ ಪೊಲೀಸರು

Update: 2022-01-20 08:47 GMT
Photo: Twitter

ಹೊಸದಿಲ್ಲಿ: 'ಬುಲ್ಲಿ ಬಾಯ್' ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಅಪರಾಧ ವಿಭಾಗದ ಸೈಬರ್ ಪೊಲೀಸರು ಗುರುವಾರ ಒಡಿಶಾದ 28 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ನೀರಜ್ ಸಿಂಗ್ ಎಂಬಿಎ ಪದವಿ ಪಡೆದಿದ್ದಾನೆ. ಪ್ರಮುಖ ಆರೋಪಿಗಳ ಜತೆಗೂಡಿ ಆ್ಯಪ್‌ನ ಯೋಜನೆ ರೂಪಿಸುವಲ್ಲಿ ತೊಡಗಿದ್ದ ಎಂದು ವರದಿಯಾಗಿದೆ.

ಸಿಂಗ್ ನನ್ನು ಮುಂಬೈಗೆ ಕರೆತರಲಾಗುತ್ತಿದ್ದು, ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿ ಹೇಳಿದರು. ಸಿಂಗ್ ಬಂಧನದೊಂದಿಗೆ ಮುಂಬೈ ಪೊಲೀಸರು ಈ ಪ್ರಕರಣದಲ್ಲಿ ಇದುವರೆಗೆ ನಾಲ್ವರನ್ನು ಬಂಧಿಸಿದ್ದಾರೆ.

ಮುಂಬೈ ಪೊಲೀಸರು ಆ್ಯಪ್‌ನ ಹಿಂದಿನ ಮಾಸ್ಟರ್‌ಮೈಂಡ್ ಎಂದು ನಂಬಲಾದ ಮಹಿಳೆಯನ್ನು ಉತ್ತರಾಖಂಡದಲ್ಲಿ ಬಂಧಿಸಿದ್ದರು.

21 ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಅವರನ್ನು ಬಾಂದ್ರಾ ನ್ಯಾಯಾಲಯವು ಜನವರಿ 10 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ಓಪನ್ ಸೋರ್ಸ್ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಗಿಟ್‌ಹಬ್‌ನಲ್ಲಿ ಹೋಸ್ಟ್ ಮಾಡಲಾದ ಬುಲ್ಲಿ ಬಾಯಿ ಎಂಬ ಅಪ್ಲಿಕೇಶನ್‌ನಲ್ಲಿ ನೂರಾರು ಮುಸ್ಲಿಂ ಮಹಿಳೆಯರ ತಿರುಚಿದ ಫೋಟೋಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂಬ ದೂರುಗಳ ನಂತರ ಮುಂಬೈ ಪೊಲೀಸರು ಸೋಮವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.

ರವಿವಾರ ಪಶ್ಚಿಮ ಮುಂಬೈ ಸೈಬರ್ ಪೊಲೀಸ್ ಠಾಣೆಯು 'ಬುಲ್ಲಿ ಬಾಯ್' ಅಪ್ಲಿಕೇಶನ್ ಡೆವಲಪರ್‌ಗಳು ಮತ್ತು ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಿದ ಟ್ವಿಟರ್ ಹ್ಯಾಂಡಲ್‌ಗಳ ವಿರುದ್ಧ ಪ್ರಕರಣ ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News