ಶಾಲಾ ಶಿಕ್ಷಕರಿಗೆ ಆನ್‍ಲೈನ್ ಪ್ರಶ್ನಾವಳಿ

Update: 2022-01-22 17:21 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.22: ರಾಷ್ಟ್ರೀಯ ಶಿಕ್ಷಣ ನೀತಿ-2020 ಶಿಫಾರಸ್ಸುಗಳಂತೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿರುತ್ತದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣದಲ್ಲಿ ಪರಿಣಾಮಕಾರಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ಶಾಲೆಗಳಿಗೆ ಅಗತ್ಯವಾದ ಮೂಲಭೂತ ಮತ್ತು ಶೈಕ್ಷಣಿಕ ಸವಲತ್ತುಗಳನ್ನು ನೀಡಬೇಕಾಗಿದೆ. ಇತ್ತೀಚಿಗೆ ಶಿಕ್ಷಕರನ್ನು ಬೋಧನಾ ಕಲಿಕಾ ಪ್ರಕ್ರಿಯೆಯಿಂದ ಹೊರಗಿಟ್ಟು, ಇಲಾಖೇತರ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಿಳಿಯಬೇಕಾಗಿದೆ.    

ಹಾಗಾಗಿ ಮುಖ್ಯ ಶಿಕ್ಷಕರಿಗೆ ಹಾಗೂ ಶಿಕ್ಷಕರಿಗೆ ಕೇಂದ್ರ ಶಿಕ್ಷಣ ಸಚಿವಾಲಯವು ಗೂಗಲ್ ಫಾರ್ಮ್‍ನಲ್ಲಿ ಪ್ರಶ್ನಾವಳಿಗಳನ್ನು ಕಳುಹಿಸಿದ್ದು, ಮುಖ್ಯ ಶಿಕ್ಷಕರು https//forms.gle/GDuWMegdtWd6VHaT7 ಮತ್ತು ಶಿಕ್ಷಕರು https//forms.gle/XF6metMbAhewNNAq7 ಲಿಂಕ್‍ಗೆ ಸಂಪರ್ಕಿಸಿ, ಪ್ರಶ್ನಾವಳಿಗಳನ್ನು ಫೆ.2ರೊಳಗೆ ಭರ್ತಿಮಾಡಿ ಆನ್‍ಲೈನ್‍ನಲ್ಲಿ ಸಲ್ಲಿಸಲು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News