ಹೊಸ ವ್ಯವಸ್ಥೆ ಜಾರಿಗೊಳಿಸುವವರೆಗೂ ಟೋಯಿಂಗ್‌ ತಾತ್ಕಾಲಿಕ ಸ್ಥಗಿತ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-02-02 17:10 GMT
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು(Bengaluru), ಫೆ.2: ಹೊಸ ಸರಳೀಕೃತ ವ್ಯವಸ್ಥೆ ಜಾರಿಗೊಳಿಸುವವರೆಗೂ ನಗರದಲ್ಲಿ ತಾತ್ಕಾಲಿಕವಾಗಿ ಟೋಯಿಂಗ್ (Toying) ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಟೋಯಿಂಗ್ ವಿವಾದ ಸಂಬಂಧ ಬುಧವಾರ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಟೋಯಿಂಗ್‌ನಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದರು.

ನಗರದಲ್ಲಿ ಸುಗಮ ವಾಹನಗಳ ಸಂಚಾರಕ್ಕೆ ನೆರವಾಗುವ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಕಿರುಕುಳ ಸಮಸ್ಯೆ ನಿವಾರಿಸಲು ಸರಕಾರ  ಶೀಘ್ರದಲ್ಲಿ ಒಂದು ನಿರ್ಧಾರಕ್ಕೆ ಬರುತ್ತದೆ. ಈ ಸಂಬಂಧ ಪೂರ್ವಭಾವಿ ಚರ್ಚೆಯನ್ನು, ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ, ಒಂದು ಸುತ್ತಿನ ಚರ್ಚೆ ನಡೆಸಿದ್ದೇನೆ ಎಂದ ಅವರು, ಚರ್ಚೆಯಾದ ವಿಷಯದ ಬಗ್ಗೆ, ಮುಖ್ಯಮಂತ್ರಿಯವರ ಜೊತೆ ಸಮಾಲೋಚಿಸಿ, ಟೋಯಿಂಗ್ ಸಮಸ್ಯೆಗೆ ಶೀಘ್ರವೇ ಪರಿಹಾರ ಘೋಷಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಚಾರ ಪೊಲೀಸ್ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಪ್ರತಿಕ್ರಿಯಿಸಿ, ಟೋಯಿಂಗ್ ಸಂಬಂಧ ನಡೆಸಿದ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಸಿಬ್ಬಂದಿ ಜವಾಬ್ದಾರಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇನ್ನೂ ಯಾವ ಏಜೆನ್ಸಿಗೂ ಟೋಯಿಂಗ್ ಪರವಾನಿಗೆಯನ್ನು ನೀಡಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಯಡಿಯೂರಪ್ಪ ಯುಗ ಅಂತ್ಯ ಎಂದ ಶಾಸಕ ಯತ್ನಾಳ್

ಟೋಯಿಂಗ್- ಹೊಸ ನಿಯಮ?
►ಗಂಟೆಗೆ ಗರಿಷ್ಠ 10 ಕಿ.ಮೀ ವೇಗದಲ್ಲಷ್ಟೆ ಟೋಯಿಂಗ್ ವಾಹನ ಚಲಿಸಬೇಕು.
►ಧ್ವನಿವರ್ಧಕ ಇರಬೇಕು.
►ಸೈರನ್ ಮಾಡಿಕೊಂಡೆ ಹೋಗಬೇಕು.
►ನೋ ಪಾರ್ಕಿಂಗ್‌ನಲ್ಲಿರುವ ವಾಹನವನ್ನು 4 ದಿಕ್ಕುಗಳಲ್ಲಿ ಫೋಟೋ ತೆಗೆಯಬೇಕು.
►2800 ಎಂಎA ವ್ಹೀಲ್ ಗಾತ್ರದ ವಾಹನಗಳನ್ನು ಟೋಯ್ ಮಾಡುವ ಸಾಮರ್ಥ್ಯ ಟೋಯಿಂಗ್ ವಾಹನಕ್ಕೆ ಇರಬೇಕು.
►ಎರಡು ಟನ್ ಹೊರುವ ಸಾಮರ್ಥ್ಯ ಟೋಯಿಂಗ್ ವಾಹನಕ್ಕೆ ಇರಬೇಕು.
►ಪ್ರತಿದಿನ ಟೋಯಿಂಗ್ ಸಿಬ್ಬಂದಿ ಹಾಗೂ ಮಾಲಕರು ಠಾಣೆಯಲ್ಲಿ ನೋಂದಣಿ ಮಾಡಬೇಕು. ಇದನ್ನು ಠಾಣಾ ಇನ್‌ಸ್ಪೆಕ್ಟರ್ ಪರಿಶೀಲನೆ ಮಾಡಬೇಕು.
►ಟೋಯಿಂಗ್ ವೇಳೆ ವಿಡಿಯೊ ಚಿತ್ರೀಕರಣ ಕಡ್ಡಾಯ
►ಇನ್‌ಸ್ಪೆಕ್ಟರ್ ಸ್ಥಳದಲ್ಲಿರುವ ಸಿಬ್ಬಂದಿ ಬಾಡಿ ಕ್ಯಾಮರಾದಿಂದ ಬರುವ ವಿಶ್ಯುಲ್ ಪರೀಕ್ಷಿಸಬೇಕು
►ಪವರ್ ಸ್ಟೇಯರಿಂಗ್ ಇರುವ ವಾಹನ ಬಳಸಬೇಕು.
►ರೊಟೇಶನ್ ಪದ್ಧತಿಯಲ್ಲಿ ಎಲ್ಲ ಎಎಸ್‌ಐಗಳನ್ನು ಟೋಯಿಂಗ್ ಕಾರ್ಯಕ್ಕೆ ನೇಮಕ ಮಾಡಬೇಕು.
►ಹ್ಯಾಂಡಿಕ್ಯಾಮರಾ, ಮುಂಬದಿ ಹಾಗೂ ಹಿಂಬದಿ ಎರಡೂ ಸಿಸಿ ಕ್ಯಾಮರಾಗಳು ಮೊಬೈಲ್ ಡಿವಿಆರ್ ಜೊತೆಗೆ ಜಿಪಿಎಸ್ ಇರಬೇಕು.
►ಐದು ನಿಮಿಷದೊಳಗಡೆ ವಾಹನದ ಮಾಲಕ ಬಂದರೆ ನೋ ಪಾರ್ಕಿಂಗ್ ದಂಡ ಕಟ್ಟಿಸಿಕೊಂಡು ಬಿಡಬೇಕು.
►ನೋ ಪಾರ್ಕಿಂಗ್‌ನಲ್ಲಿದ್ದರೆ ವಾಹನದ ವಿಡಿಯೊವನ್ನು 30 ದಿನ ಸುರಕ್ಷಿತವಾಗಿ ಇಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News