ಉತ್ತರಾಖಂಡದಲ್ಲಿ ಮೋದಿ ಅಲೆಯಿಲ್ಲ, ನಿರುದ್ಯೋಗ, ಬೆಲೆಯೇರಿಕೆಯ ಅಲೆಗಳಿವೆ ಎಂದ ಹರೀಶ್ ರಾವತ್

Update: 2022-02-14 07:59 GMT

ಡೆಹ್ರಾಡೂನ್: "ಉತ್ತರಾಖಂಡದಲ್ಲಿ ನಾನು ಬೆಲೆಯೇರಿಕೆಯ ಅಲೆಯನ್ನು ನೋಡುತ್ತಿದ್ದೇನೆ, ಇಲ್ಲಿ ನಿರುದ್ಯೋಗದ ಅಲೆಯಿದೆ. ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧದ ಅಲೆ ಉತ್ತರಾಖಂಡದಲ್ಲಿದೆ. ಉತ್ತರಾಖಂಡದಲ್ಲಿ ಶೂನ್ಯ ಪ್ರಗತಿಯ ವಿರುದ್ಧ ಜನರ ಆಕ್ರೋಶದ ಅಲೆಯಿದೆ" ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಹೇಳಿದ್ದಾರೆ.

ತಾವು ಸ್ಪರ್ಧಿಸುತ್ತಿರುವ ಲಾಲ್ ಕುವಾನ್ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ಹಿರಿಯ ಕಾಂಗ್ರೆಸ್ ನಾಯಕರಾದ ರಾವತ್, ರಾಜ್ಯದಲ್ಲಿ ಮೋದಿ ಅಲೆ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಮೇಲಿನಂತೆ ಹೇಳಿದ್ದಾರೆ.

"ಬಿಜೆಪಿ ನಾಯಕತ್ವವು ರಾಜ್ಯದಲ್ಲಿ ಎರಡು ಮುಖ್ಯಮಂತ್ರಿಗಳನ್ನು (ತ್ರಿವೇಂದ್ರ ಸಿಂಗ್ ರಾವತ್ ಮತ್ತು ತೀರತ್ ಸಿಂಗ್ ರಾವತ್) ಅವರನ್ನು ಕೈಬಿಡುವ ಮೂಲಕ ಬಿಜೆಪಿ ಜನರ ತೀರ್ಪಿನ ಹತ್ಯೆಗೈದಿದೆ. ಮೂರನೇ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಗಣಿಗಾರಿಕೆ ಇಷ್ಟ. ಅವರಿಗೆ ಬೇರೇನೂ ತಿಳಿಯದೇ ಇರುವುದರಿಂದ ಅವರ ಆಡಳಿತದಲ್ಲಿ ಉತ್ತರಾಖಂಡದ ನದಿಗಳನ್ನು ಲೂಟಿಗೈಯ್ಯಲಾಗಿದೆ" ಎಂದು ರಾವತ್ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News