ಪ್ರೇಮಿಗಳ ದಿನದಂದು ಜೋಡಿಗಳು ಪಾರ್ಕ್‌ ನಲ್ಲಿ ಕಂಡು ಬಂದರೆ ಅವರ ಕಾಲು ಕತ್ತರಿಸುತ್ತೇವೆ: ಶಿವಸೇನೆ ಎಚ್ಚರಿಕೆ

Update: 2022-02-14 08:15 GMT
Photo: Indiatoday

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶಿವಸೇನೆ ಕಾರ್ಯಕರ್ತರು ರವಿವಾರ ಪ್ರತಿಭಟನೆ ನಡೆಸಿದರು, ಪ್ರೇಮಿಗಳ ದಿನವನ್ನು ಆಚರಿಸುವುದನ್ನು ತಡೆಯುವುದಾಗಿ ಪ್ರತಿಜ್ಞೆ ಮಾಡಿದರು. ಇದೇ ಸಂದರ್ಭದಲ್ಲಿ, ಶಿವಸೇನೆಯ ಕಾರ್ಯಕರ್ತರು ಕಾಳಿಕಾ ಶಕ್ತಿ ಪೀಠದ ದೇವಸ್ಥಾನದಲ್ಲಿ 'ಲಾಠಿ'ಗಳನ್ನು (ಕೋಲು) ಪೂಜಿಸುತ್ತಿರುವುದು ಕಂಡುಬಂದಿದೆ ಎಂದು indiatoday.in ವರದಿ ಮಾಡಿದೆ.

"ಪ್ರೇಮಿಗಳ ದಿನದಂದು ಸಾರ್ವಜನಿಕ ಉದ್ಯಾನವನಗಳಲ್ಲಿ ಜೋಡಿಗಳು ಸುತ್ತಾಡುವುದನ್ನು ಕಂಡರೆ ನಾವು ಅವರ ಕಾಲುಗಳನ್ನು ಮುರಿಯುತ್ತೇವೆ" ಎಂದು ಅವರು ಎಚ್ಚರಿಕೆ ನೀಡಿದರು.

ಶಿವಸೇನಾ ಕಾರ್ಯಕರ್ತರು ಪ್ರೇಮಿಗಳ ದಿನದ ರೂಪದಲ್ಲಿರುವ "ಪಾಶ್ಚಿಮಾತ್ಯ ಸಂಸ್ಕೃತಿಯ ಆಚರಣೆ" ಯನ್ನು ವಿರೋಧಿಸಲು ಭೋಪಾಲ್‌ನ ವಿವಿಧ ಭಾಗಗಳಿಗೆ 'ಕೋಲು'ಗಳನ್ನು ಹಿಡಿದು ಪ್ರಯಾಣಿಸುವುದಾಗಿ ಹೇಳಿದರು. "ಹಬ್ಬ ಆಚರಿಸುವುದು ಕಂಡುಬಂದರೆ, ನಾವು ಜೋಡಿಗಳಿಗೆ ಸ್ಥಳದಲ್ಲೇ ಮದುವೆ ಮಾಡುತ್ತೇವೆ ಮತ್ತು ಡ್ರಮ್‌ಗಳೊಂದಿಗೆ ಮೆರವಣಿಗೆ ನಡೆಸುತ್ತೇವೆ" ಎಂದು ಶಿವಸೇನೆ ಕಾರ್ಯಕರ್ತರೊಬ್ಬರು ಹೇಳಿದರು.

ಇದೇ ವೇಳೆ ಭೋಪಾಲ್‌ನ ಪಬ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್ ನಿರ್ವಾಹಕರಿಗೆ ಶಿವಸೇನೆ ಎಚ್ಚರಿಕೆ ನೀಡಿದ್ದು, ಪ್ರೇಮಿಗಳ ದಿನದಂದು ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News