ಉಕ್ರೇನ್ ಗೆ ಅತ್ಯಾಧುನಿಕ ಶಸ್ತ್ರಾಸ್ತ್ರದ ನೆರವು : ಕೆನಡಾ ಘೋಷಣೆ

Update: 2022-02-15 18:07 GMT

ಸಾಂದರ್ಭಿಕ ಚಿತ್ರ
 

ಒಟ್ಟಾವ :ರಶ್ಯಾದ ಸಂಭಾವ್ಯ ಆಕ್ರಮಣದಿಂದ ರಕ್ಷಿಸಿಕೊಳ್ಳಲು ಉಕ್ರೇನ್ಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಲಾಗುವುದು ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಸೋಮವಾರ ಘೋಷಿಸಿದ್ದಾರೆ.

ಉಕ್ರೇನ್ ಗಡಿಯಲ್ಲಿ ತಲೆದೋರಿರುವ ಗಂಭೀರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆ ದೇಶಕ್ಕೆ 7.8 ಮಿಲಿಯನ್ ಕೆನಡಿಯನ್ ಡಾಲರ್ ಮೌಲ್ಯದ ಮಾರಕ ಶಸ್ತ್ರಾಸ್ತ್ರಗಳನ್ನು ಒದಗಿಸುವ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ. ಉಕ್ರೇನ್ನ ಕೋರಿಕೆಯ ಮೇರೆಗೆ ಈ ನೆರವು ಒದಗಿಸಲಾಗುತ್ತಿದ್ದು, ಈಗಾಗಲೇ ಒದಗಿಸಿರುವ ಇತರ ಶಸ್ತ್ರಾಸ್ತ್ರಗಳ ಜತೆ ಹೆಚ್ಚುವರಿಯಾಗಿ ಈ ಆಯುಧಗಳನ್ನು ಒದಗಿಸಲಾಗುವುದು. ಜತೆಗೆ, ಇನ್ನಷ್ಟು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಉಕ್ರೇನ್ಗೆ ಇನ್ನಷ್ಟು ಸಾಲದ ನೆರವು ನೀಡಲಾಗುವುದು ಎಂದರು. ಈ ವರ್ಷದ ಆರಂಭದಿಂದ ಉಕ್ರೇನ್ಗೆ 620 ಮಿಲಿಯನ್ ಕೆನಡಿಯನ್ ಡಾಲರ್ ಸಾಲದ ನೆರವು ಘೋಷಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಉಕ್ರೇನ್ನ ಪಡೆಗಳಿಗೆ ತರಬೇತಿ ನೀಡುವ ಯೋಜನೆಯಂತೆ 2015ರಿಂದ ಸುಮಾರು 200 ಯೋಧರನ್ನು ಕೆನಡಾ ಉಕ್ರೇನ್ನಲ್ಲಿ ನಿಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News