ಪಂಚ ರಾಜ್ಯ ಚುನಾವಣೆ: ವಶಪಡಿಸಿಕೊಂಡ ಹಣ, ಮದ್ಯ, ಗಿಫ್ಟ್ ಮೌಲ್ಯ ಎಷ್ಟು ಗೊತ್ತೇ ?

Update: 2022-02-26 02:58 GMT

ಹೊಸದಿಲ್ಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಭಾರತದ ಚುನಾವಣಾ ಆಯೋಗ ಸುಮಾರು 1000 ಕೋಟಿ ರೂಪಾಯಿ ಮೌಲ್ಯದ ನಗದು, ಡ್ರನ್ಸ್, ಮದ್ಯ ಮತ್ತು ಇತರ ಉಡುಗೊರೆಗಳನ್ನು ವಶಪಡಿಸಿಕೊಂಡಿದೆ. ಇದು 2017ರಲ್ಲಿ ನಡೆದ ಹಿಂದಿನ ಸುತ್ತಿನ ಚುನಾವಣೆಗೆ ಹೋಲಿಸಿದರೆ ನಾಲ್ಕು ಪಟ್ಟು ಅಧಿಕ.

ಪಂಜಾಬ್‌ನಲ್ಲಿ ಅತ್ಯಧಿಕ ಅಂದರೆ 510.91 ಕೋಟಿ, ಉತ್ತರ ಪ್ರದೇಶದಲ್ಲಿ 307.92 ಕೋಟಿ, ಮಣಿಪುರದಲ್ಲಿ 167.83 ಕೋಟಿ, ಉತ್ತರಾಖಂಡದಲ್ಲಿ 18.81 ಕೋಟಿ ಮತ್ತು ಗೋವಾದಲ್ಲಿ 12.73 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿಕೆ ನೀಡಿದೆ.

ವಶಪಡಿಸಿಕೊಂಡ ವಸ್ತುಗಳ ಮೌಲ್ಯ 1018 ಕೋಟಿ ಆಗಿದ್ದು, ಇದು 2017ರಲ್ಲಿ ವಶಪಡಿಸಿಕೊಂಡ 299.84 ಕೋಟಿ ರೂಪಾಯಿಗೆ ಹೋಲಿಸಿದರೆ ನಾಲ್ಕು ಪಟ್ಟು ಅಧಿಕ. ಐದು ರಾಜ್ಯಗಳಲ್ಲಿ ಒಟ್ಟು 140.29 ಕೋಟಿ ರೂಪಾಯಿ ನಗದು, 99.84 ಕೋಟಿ ರೂಪಾಯಿ ಮೌಲ್ಯದ 82 ಲಕ್ಷ ಲೀಟರ್ ಮದ್ಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಇದರ ಜತೆಗೆ 569.52 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳು, 115.054 ಕೋಟಿ ಮೌಲ್ಯದ ಅಮೂಲ್ಯ ಲೋಹಗಳು ಮತ್ತು 93.5 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜತೆಗೆ ಕಾನೂನು ಜಾರಿ ಅಧಿಕಾರಿಗಳು ಪಂಜಾಬ್‌ನಲ್ಲಿ 109 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದು, ಉತ್ತರ ಪ್ರದೇಶದಲ್ಲಿ 8 ಲಕ್ಷ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News