ಟ್ವೀಟ್ ಗಳನ್ನು ಖಂಡಿತ ನಿಲ್ಲಿಸಲ್ಲ, ಪ್ರಶ್ನೆ ಮಾಡೇ ಮಾಡ್ತೀನಿ: ಚೇತನ್ ಅಹಿಂಸಾ

Update: 2022-02-28 19:09 GMT

ಬೆಂಗಳೂರು: ನ್ಯಾಯಾಧೀಶರ ನಿಲುವಿನ ಕುರಿತು ಟೀಕೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಪರಪ್ಪನ‌ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಪ್ರಕರಣದಲ್ಲಿ ಜಾಮೀನು ಕೋರಿ ನಟ ಚೇತನ್ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಶುಕ್ರವಾರ ವಿಚಾರಣೆ ನಡೆಸಿದ ನಗರದ 8ನೆ ಎಸಿಎಂಎಂ ಕೋರ್ಟ್ ಶುಕ್ರವಾರವೇ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿತ್ತು. ಆದರೆ,  ನಾಲ್ಕನೇ‌ ಶನಿವಾರ ಆಗಿರುವುದರಿಂದ ಶ್ಯೂರಿಟಿ ಒದಗಿಸುವುದು ಸಾಧ್ಯವಾಗದಿರುವ ಕಾರಣ ಚೇತನ್​ ಅವರ ಬಿಡುಗಡೆ ವಿಳಂಬವಾಗಿತ್ತು.

ಇದನ್ನೂ ಓದಿ: ನ್ಯಾಯಾಧೀಶರ ಕುರಿತು ಟ್ವೀಟ್ ಮಾಡಿದ ಪ್ರಕರಣ: ನಟ ಚೇತನ್ ಗೆ ಜಾಮೀನು

ಇದೀಗ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ  ಜೈಲಿನಿಂದ ಬಿಡುಗಡೆಗೊಂಡಿರುವ ನಟ ಚೇತನ್ , ' ಟ್ವಿಟ್ ಗಳನ್ನು ಖಂಡಿತ ನಿಲ್ಲಿಸಲ್ಲ, ನಮಗೆ ಪ್ರಜಾಪ್ರಭುತ್ವದಲ್ಲಿ ಪ್ರಶ್ನಾತೀತರಲ್ಲ. ಪ್ರಶ್ನೆ ಮಾಡೋದಕ್ಕೆ ಎಲ್ಲರಿಗೂ ಹಕ್ಕಿದೆ. ಅದು ಯಾರೇ ಆಗಿರಲಿ ಪ್ರಶ್ನೆ ಮಾಡೇ ಮಾಡ್ತೀನಿ' ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News