ಅಮುಲ್ ಹಾಲಿನ ದರ ಲೀಟರ್ ಗೆ 2 ರೂ. ಏರಿಕೆ

Update: 2022-03-01 17:28 GMT
Photo: Twitter/@Amul_Coop

ಅಹ್ಮದಾಬಾದ್,ಫೆ.28: ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್)ವು ದೇಶಾದ್ಯಂತ ಅಮುಲ್ ಬ್ರಾಂಡ್ ನ ಹಾಲಿನ ದರದಲ್ಲಿ ಪ್ರತಿ ಲೀಟರ್ ಗೆ 2 ರೂ. ಏರಿಕೆ ಮಾಡಿದೆ. ಮಂಗಳವಾರದಿಂದಲೇ ನೂತನ ದರಗಳು ಜಾರಿಗೆ ಬರಲಿದೆ.

ಪ್ರಸಕ್ತ ವಾಣಿಜ್ಯ ವರ್ಷದಲ್ಲಿ ಅಮುಲ್ ಸಂಸ್ಥೆಯು ಹಾಲಿನ ದರದಲ್ಲಿ ಏರಿಕೆ ಮಾಡಿರುವುದು ಇದು ಎರಡನೆ ಸಲವಾಗಿದೆ. 2021ರ ಜೂನ್ನಲ್ಲಿ ಜಿಸಿಎಂಎಂಎಫ್ ಹಾಲಿನ ದರವನ್ನು ಲೀಟರ್‌ಗೆ 2 ರೂ. ಹೆಚ್ಚಿಸಿತ್ತು. ಬೆಲೆ ಏರಿಕೆ ಮಾಡಿರುವುದನ್ನು ಸಮರ್ಥಿಸಿದ್ದು ಲೀಟರ್‌ಗೆ 2 ರೂ. ಹೆಚ್ಚಿಸಿರುವುದರಿಂದ ಕನಿಷ್ಠ ರಿಟೇಲ್ ಮಾರಾಟ ದರ (ಎಂಆರ್‌ಪಿ)ದಲ್ಲಿ ಶೇ.4ರಷ್ಟು ಏರಿಕೆಯಾದಂತಾಗಿದೆ. ಇದು ಸರಕಾರಿ ಹಣದುಬ್ಬರಕ್ಕಿಂತ ತೀರಾ ಕಡಿಮೆಯಾಗಿದೆ ಎಂದು ಅದು ಹೇಳಿದೆ.
  
ನೂತನ ದರ ಪರಿಷ್ಕರಣೆಯಿಂದಾಗಿ ಅಹ್ಮದಾಬಾದ್ ಹಾಗೂ ಸೌರಾಷ್ಟ್ರದ ಮಾರುಕಟ್ಟೆಗಳಲ್ಲಿ ಅಮುಲ್ ಗೋಲ್ಡ್ ನ ದರವು 500 ಮಿ.ಲೀ.ಗೆ 30 ರೂ., ಅಮುಲ್ ತಾಜಾ 500 ಮಿ.ಲೀ.ಗೆ 24 ರೂ. ಹಾಗೂ ಅಮುಲ್ ಶಕ್ತಿ 500 ಮಿ.ಲೀ.ಗೆ 27 ರೂ. ಆಗಲಿದೆ ಎಂದು ಸಂಸ್ಥೆಯ ಪತ್ರಿಕಾ ಹೇಳಿಕೆ ತಿಳಿಸಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News