ಜಮ್ಮು ಕಾಶ್ಮೀರ: ಅವಳಿ ಸ್ಪೋಟ

Update: 2022-03-27 19:28 GMT

ಜಮ್ಮು: ಜಮ್ಮು ಹಾಗೂ ಕಾಶ್ಮೀರದ ರಾಜೌರಿ ಜಿಲ್ಲೆಯ ಜನನಿಬಿಡ ಮಾರುಕಟ್ಟೆಯಲ್ಲಿ ಎರಡು ಕಡಿಮೆ ತೀವ್ರತೆಯ ಸ್ಪೋಟ ಸಂಭವಿಸಿದ್ದು, ಜನರಲ್ಲಿ ಆತಂಕ ಉಂಟು ಮಾಡಿತು.

ʼಕೊಟ್ರಾಂಕದಲ್ಲಿ ರವಿವಾರ ರಾತ್ರಿ 8.15 ಹಾಗೂ ರಾತ್ರಿ 8.30ರ ನಡುವೆ ಸ್ಫೋಟ ಸಂಭವಿಸಿತು. ಯಾವುದೇ ಪ್ರಾಣ ಹಾಗೂ ಸೊತ್ತು ಹಾನಿಯಾಗಿಲ್ಲʼ ಎಂದು ವಕ್ತಾರರು ತಿಳಿಸಿದ್ದಾರೆ.

ಮೊದಲ ಸ್ಫೋಟ ಕೊಟ್ರಾಂಕ ಮಾರುಕಟ್ಟೆಯ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ರಾತ್ರಿ 8.15ಕ್ಕೆ ಸಂಭವಿಸಿತು. ಪೊಲೀಸರು ಹಾಗೂ ಇತರ ಭದ್ರತಾ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರು ಹಾಗೂ ಸ್ಫೋಟದ ಕಾರಣದ ಬಗ್ಗೆ ತನಿಖೆ ನಡೆಸಲು ಪ್ರದೇಶವನ್ನು ಸುತ್ತುವರಿದರು.

ತನಿಖೆ ನಡೆಯುತ್ತಿದ್ದಂತೆ 10 ನಿಮಿಷಗಳ ಬಳಿಕ ಇನ್ನೊಂದು ಸ್ಫೋಟ ಸಂಭವಿಸಿತು. ಕೂಡಲೇ ಸಂಪೂರ್ಣ ಪ್ರದೇಶವನ್ನು ಸುತ್ತುವರಿಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸ್ಫೋಟದಲ್ಲಿ ಭಯೋತ್ಪಾದನೆಯ ಆಯಾಮವನ್ನು ಅಧಿಕಾರಿಗಳು ತಳ್ಳಿ ಹಾಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News