ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಪಾಳಕ್ಕೆ ಭಾರತದ ರಾಯಭಾರಿ ಕ್ವಾತ್ರಾ ನೇಮಕ‌

Update: 2022-04-04 16:36 GMT

ಹೊಸದಿಲ್ಲಿ,ಎ.4: ನೇಪಾಳಕ್ಕೆ ಭಾರತದ ರಾಯಭಾರಿಯಾಗಿರುವ ವಿನಯ ಕ್ವಾತ್ರಾ ಅವರನ್ನು ನೂತನ ವಿದೇಶಾಂಗ ಕಾರ್ಯದರ್ಶಿಯನ್ನಾಗಿ ಸರಕಾರವು ಸೋಮವಾರ ನೇಮಕಗೊಳಿಸಿದ್ದು,ಅವರು ಮೇ ತಿಂಗಳಿನಲ್ಲಿ ಅಧಿಕಾರವನ್ನು ಸ್ವೀಕರಿಸಲಿದ್ದಾರೆ. ಜನವರಿ 2020ರಲ್ಲಿ ಅಧಿಕಾರ ಸ್ವೀಕರಿಸಿದ್ದ ಹಾಲಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಅವರು ಎಪ್ರಿಲ್ 30ರಂದು ನಿವೃತ್ತರಾಗಲಿದ್ದಾರೆ.

1988ರ ತಂಡದ ಭಾರತೀಯ ವಿದೇಶ ಸೇವೆ (ಐಎಫ್ಎಸ್) ಅಧಿಕಾರಿಯಾಗಿರುವ ಕ್ವಾತ್ರಾ ಫ್ರಾನ್ಸ್‌ನಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಪ್ರಧಾನಿ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಯೂ ಆಗಿದ್ದರು. ತನ್ನ 32 ವರ್ಷಗಳ ಸೇವೆಯಲ್ಲಿ ವಾಷಿಂಗ್ಟನ್ ಡಿಸಿ ಮತ್ತು ಬೀಜಿಂಗ್‌ನಲ್ಲಿಯ ಭಾರತೀಯ ರಾಯಭಾರ ಕಚೇರಿಗಳಲ್ಲೂ ಅವರು ಕಾರ್ಯ ನಿರ್ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News