ಬೆಂಗಳೂರಿನ ಆಸ್ಟರ್ ನ್ಯೂರೋಸೈನ್ಸ್ ನಿಂದ ಪಾರ್ಕಿನ್ಸನ್‌ ಜಾಗೃತಿಗಾಗಿ ವಾಕ್

Update: 2022-04-11 14:34 GMT

ಬೆಂಗಳೂರು: ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಜಾಗೃತಿ ಹೆಚ್ಚಿಸುವ ಸಲುವಾಗಿ, ಆಸ್ಟರ್ ಸಿಎಂಐ ಆಸ್ಪತ್ರೆಯ ಆಸ್ಟರ್ ನ್ಯೂರೋಸೈನ್ಸ್ ಮತ್ತು ಆಸ್ಟರ್ ಆರ್‌ವಿ ಆಸ್ಪತ್ರೆ, ಬೆಂಗಳೂರಿನ ʼಐ ಲವ್ ಟು ಕೇರ್ (ಇಂಡಿಯಾ) ಚಾರಿಟೆಬಲ್ ಟ್ರಸ್ಟ್ʼ ಸಹಭಾಗಿತ್ವದಲ್ಲಿ ವಿಶ್ವ ಪಾರ್ಕಿನ್ಸನ್ ದಿನವಾದ ಇಂದು ವಾಕಥಾನ್ ಅನ್ನು ಆಯೋಜಿಸಿತ್ತು.

ಈ ಕಾರ್ಯಕ್ರಮ ಪಾರ್ಕಿನ್ಸನ್ ರೋಗಿಗಳು ಸೇರಿದಂತೆ, ವೃತ್ತಿಪರರು, ವೈದ್ಯರು ಮತ್ತು ದಾದಿಯರು ಸೇರಿದಂತೆ 150ಕ್ಕೂ ಹೆಚ್ಚು ನಾಗರಿಕರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.

ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರದ ಕಾರ್ಮಿಕ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಕಲ್ಪನಾ ಗೋಪಾಲನ್ (ಐಎಎಸ್) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೆ ಉದ್ದೇಶಕ್ಕೆ ಬೆಂಬಲ ಸೂಚಿಸುವ ಸಲುವಾಗಿ ತಾವೂ ವಾಕಥಾನ್‌ನಲ್ಲಿ ಭಾಗವಹಿಸಿದರು.

ಪಾರ್ಕಿನ್ಸನ್ ಕಾಯಿಲೆ ಒಂದು ನ್ಯೂರೋ ಡಿಜೆನೆರೇಟಿವ್ ಡಿಸಾರ್ಡರ್ ಆಗಿದೆ. ಇದು ನಿಧಾನವಾಗಿ ಪ್ರಾರಂಭವಾಗುತ್ತದೆ ಮತ್ತು ದೀರ್ಘಾವಧಿಯಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವವರು ಕೈಕಾಲುಗಳ ನಡುಗುವಿಕೆ, ಸ್ನಾಯುಗಳ ಬಿಗಿತ ಮತ್ತು ನಡೆಯಲು ತೊಂದರೆ ಮತ್ತು ಸಮತೋಲನ ಮತ್ತು ಸಮನ್ವಯವನ್ನು ಕಾಪಾಡಿಕೊಳ್ಳಲು ಕಷ್ಟವಾಗುವುದು ಮುಂತಾದ ಲಕ್ಷಣಗಳನ್ನು ಪ್ರದರ್ಶಿಸುತ್ತಾರೆ. ರೋಗವು ಉಲ್ಬಣಗೊಳ್ಳುತ್ತಿದ್ದಂತೆ, ಅವರು ಹೆಚ್ಚುವರಿಯಾಗಿ ಮಾತನಾಡಲು ತೊಂದರೆ, ನಿದ್ರಾಹೀನತೆ, ನೆನಪಿನ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು, ನಡವಳಿಕೆಯಲ್ಲಿ ಬದಲಾವಣೆಗಳು ಮತ್ತು ಇತರ ಹಲವಾರು ಅಡ್ಡಪರಿಣಾಮಗಳನ್ನು ಅನುಭವಿಸುತ್ತಾರೆ.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಡಾ.ಕಲ್ಪನಾ ಗೋಪಾಲನ್ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿ, ಪಾರ್ಕಿನ್ಸನ್ ಕಾಯಿಲೆಗೆ ಚಿಕಿತ್ಸೆ ನೀಡಬಹುದಾಗಿದೆ ಮತ್ತು ನಿಭಾಯಿಸಲು ಸಾಧ್ಯ ಎಂಬುದನ್ನು ಎಲ್ಲರೂ - ರೋಗಿಗಳು, ಕುಟುಂಬಗಳು ಮತ್ತು ಸಮಾಜ ಅರ್ಥಮಾಡಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಆದಾಗ್ಯೂ, ಪಾರ್ಕಿನ್ಸನ್ ಕಾಯಿಲೆ ಹೆಚ್ಚುತ್ತಿರುವುದನ್ನು ಪರಿಗಣಿಸಿ, ಪಾರ್ಕಿನ್ಸೋನಿಸಂ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಸಾರ್ವಜನಿಕ ತುರ್ತು ಪ್ರಜ್ಞೆಯನ್ನು ಬೆಳೆಸುವ ಅವಶ್ಯಕತೆಯಿದೆ. ಭಾರತದಲ್ಲಿ, ನಿರ್ಲಕ್ಷ್ಯ ಮತ್ತು ತಪ್ಪು ಮಾಹಿತಿ ಆರಂಭಿಕ ರೋಗನಿರ್ಣಯಕ್ಕೆ ಅಡೆತಡೆಗಳಾಗಿರಬಹುದು ಮತ್ತು ರೋಗಿಗಳಿಗೆ ಸೂಕ್ತ ಆರೈಕೆ ದೊರೆಯದಿರಬಹುದು. ಇದನ್ನು ಗಮನದಲ್ಲಿಟ್ಟುಕೊಂಡು, ಆಸ್ಟರ್ ಆಸ್ಪತ್ರೆಯು ಈ ಕ್ಷೀಣಗೊಳ್ಳುವ, ಆದರೂ  ಚಿಕಿತ್ಸೆ ನೀಡಬಹುದಾದ ಮೆದುಳಿನ ಅಸ್ವಸ್ಥತೆಯ ಬಗ್ಗೆ ಜಾಗೃತಿ ಮೂಡಿಸಲು ಈ ವಾಕಥಾನ್ ಆಯೋಜಿಸಿದೆ. ಈ ಕಾರ್ಯಕ್ರಮದ ಭಾಗವಾಗಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ಆಸ್ಟರ್‌ಗೆ ಧನ್ಯವಾದ ಅರ್ಪಿಸುತ್ತೇನೆ ಮತ್ತು ಇಂದು ಇಲ್ಲಿ ಹಾಜರಿರುವ ಪ್ರತಿಯೊಬ್ಬರನ್ನು ಪ್ರಶಂಸಿಸುತ್ತೇನೆ ಎಂದರು.

ಆಸ್ಟರ್ ಹಾಸ್ಪಿಟಲ್ಸ್ ಬೆಂಗಳೂರು ಗ್ಲೋಬಲ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ನ್ಯೂರೋಸೈನ್ಸ್‌ ನ ನ್ಯೂರೋಸರ್ಜರಿ ವಿಭಾಗದ ಮುಖ್ಯ ಸಲಹಾ ತಜ್ಞ ಮತ್ತು ಕಾರ್ಯಕ್ರಮ ನಿರ್ದೇಶಕ ಡಾ. ರವಿ ಗೋಪಾಲ್ ವರ್ಮಾ ಮಾತನಾಡಿ, “ಭಾರತವು ಸುಮಾರು 10 ಲಕ್ಷ ಪಾರ್ಕಿನ್ಸನ್ ರೋಗಿಗಳಿಗೆ ನೆಲೆಯಾಗಿದೆ ಮತ್ತು ಪ್ರತಿ ವರ್ಷ 75 ಸಾವಿರ ಹೊಸಬರಲ್ಲಿ ಈ ರೋಗ ಪತ್ತೆಯಾಗುತ್ತಿದೆ. ಈ ರೋಗವು ಹೆಚ್ಚಾಗಿ 60 ವರ್ಷ ಮತ್ತು ಮೇಲ್ಪಟ್ಟ ವಯಸ್ಸಾದವರನ್ನು ಕಾಡುತ್ತದೆ. ಆದರೆ, ಈಗ ಇದನ್ನು ಯುವ ಪೀಳಿಗೆಯಲ್ಲಿಯೂ ಕಾಣಬಹುದು.

ಪಾರ್ಕಿನ್ಸನ್ ಕಾಯಿಲೆಗೆ, ಅದೃಷ್ಟವಶಾತ್, ಯಶಸ್ವಿ ಚಿಕಿತ್ಸೆಯಿದೆ. ಡೀಪ್ ಬ್ರೈನ್ ಸ್ಟಿಮ್ಯುಲೇಶನ್ (ಡಿಬಿಎಸ್) ಜೊತೆಗೆ ವೈದ್ಯಕೀಯ ಚಿಕಿತ್ಸೆ ಪಾರ್ಕಿನ್ಸನ್ ಕಾಯಿಲೆಯ ನಿರ್ವಹಣೆಯಲ್ಲಿ ಕ್ರಾಂತಿಯನ್ನೇ ಮಾಡಿದೆ. ಇದು ರೋಗಿಯು ಸಾಮಾನ್ಯ ಮತ್ತು ಕ್ರಿಯಾಶೀಲ ಜೀವನ ನಡೆಸಲು ಅನುವು ಮಾಡಿಕೊಡುತ್ತದೆ. ಡಿಬಿಎಸ್‌ ಒಂದು ನಿರ್ವಾಹಕ ಶಸ್ತ್ರಚಿಕಿತ್ಸೆಯಾಗಿದ್ದು, ರೋಗಿಯ ಮೆದುಳಿನ ನಿರ್ದಿಷ್ಟ ಪ್ರದೇಶಗಳಲ್ಲಿ ವಿದ್ಯುದ್ವಾರಗಳನ್ನು ಇರಿಸಲಾಗುತ್ತದೆ ಮತ್ತು ಎದೆಯ ಗೋಡೆಯಲ್ಲಿ ಇರಿಸಲಾದ ಪೇಸ್‌ಮೇಕರ್ ಸಹಾಯದಿಂದ ಉತ್ತೇಜಿಸಲಾಗುತ್ತದೆ. ಈ ಸಂದರ್ಭದಲ್ಲಿ, ಪೇಸ್‌ಮೇಕರ್ ವಿಶಿಷ್ಟವಾಗಿದೆ, ಏಕೆಂದರೆ ಇದಕ್ಕೆ ಮೆದುಳಿನ ಪ್ರತಿಕ್ರಿಯೆಯನ್ನು ಸ್ವೀಕರಿಸುವ ಸಾಮರ್ಥ್ಯವಿದೆ ಮತ್ತು ಮೆದುಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅಳವಡಿಸಲಾದ ವಿದ್ಯುದ್ವಾರಗಳ ಮೂಲಕ ಬೇಡಿಕೆಗೆ ಅನುಗುಣವಾಗಿ ಪ್ರಚೋದನೆಯ ಪ್ರಮಾಣವನ್ನು ನಿರ್ಧರಿಸುತ್ತದೆ. ರೋಗಿಯಲ್ಲಿ ಸುಧಾರಣೆಯ ಲಕ್ಷಣಗಳು ಕಂಡುಬಂದಾಗ ಔಷಧಿಗಳನ್ನು ಕಡಿಮೆಗೊಳಿಸಲಾಗು ತ್ತದೆ. ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳನ್ನು ನಿವಾರಿಸಲು ಮತ್ತು ಔಷಧಿಗಳ ಮೇಲೆ ರೋಗಿಯ ಅವಲಂಬನೆ ಯನ್ನು ಕಡಿಮೆ ಮಾಡಲು ಶಸ್ತ್ರಚಿಕಿತ್ಸೆ ಹೆಚ್ಚು ಪ್ರಯೋಜನಕಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News