"ಒತ್ತಡ ತಾಳಿಕೊಳ್ಳಲು ಸಾಧ್ಯವಾಗುತ್ತಿಲ್ಲ": ಸುಸೈಡ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ನೀಟ್ ಆಕಾಂಕ್ಷಿ ಯುವತಿ

Update: 2022-04-12 12:16 GMT

ಲಕ್ನೋ: ವೈದ್ಯಕೀಯ ಸೀಟು ಆಕಾಂಕ್ಷಿಯಾಗಿದ್ದ 19 ವರ್ಷದ ಯುವತಿಯೊಬ್ಬಳು  ಲಕ್ನೋದ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೀಟ್‍ಗೆ ಹಾಜರಾಗಲು ತಯಾರಿ ನಡೆಸುತ್ತಿದ್ದ ಆಕೆ ಸುಸೈಡ್ ನೋಟ್ ಕೂಡ ಬರೆದಿಟ್ಟಿದ್ದು ಅದರಲ್ಲಿ  ಒತ್ತಡ ತಾಳಲಾಗದೇ ಜೀವನ ಅಂತ್ಯಗೊಳಿಸುತ್ತಿರುವುದಾಗಿ ತಿಳಿಸಿದ್ದಾಳೆ.

"ನಾನು ಆಂತರಿಕವಾಗಿ ಗಟ್ಟಿಯಾಗಿಲ್ಲ. ನನಗೆ ಒತ್ತಡವನ್ನು ತಾಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ನಿರ್ಧಾರದಿಂದ ನನಗೆ ಸಂತೋಷವಿಲ್ಲ. ನಾನು ಸಮಯ ವ್ಯರ್ಥ ಮಾಡಿದ್ದೇನೆ. ನೀವು ನನ್ನ ಮೇಲೆ ನಂಬಿಕೆಯಿರಿಸಿದ್ದೀರಿ ಆದರೆ ಅದನ್ನು ನನಗೆ ಉಳಿಸಿಕೊಳ್ಳಲಾಗಿಲ್ಲ, ದಯವಿಟ್ಟು ನನ್ನನ್ನು ಕ್ಷಮಿಸಿ" ಎಂದು ಆಕೆ ಸುಸೈಡ್ ನೋಟ್‍ನಲ್ಲಿ ಬರೆದಿದ್ದಾಳೆ.

ಮೃತ ಯುವತಿ ಶಮಾ ಓಝಾ ತನ್ನ ತಾಯಿಯ ಜತೆಗೆ ಲಕ್ನೋದ ಸೆಕ್ಟರ್ 12ನಲ್ಲಿರುವ ಕಹ್ಲೋನ್ ಗಾರ್ಡನ್ ಪ್ರದೇಶದ ನಿವಾಸಿಯಾಗಿದ್ದಳು. ಆತ್ಮಹತ್ಯೆಗೈದ ದಿನ ಆಕೆ ಮನೆಯಲ್ಲಿ ಒಂಟಿಯಾಗಿದ್ದಳು ಹಾಗೂ ಆಕೆಯ ತಾಯಿ ತಾವು ಕೆಲಸ ಮಾಡುವ ಶಾಲೆಗೆ ತೆರಳಿದ್ದರು.

ತಾಯಿ ಮನೆಗೆ ಮರಳಿದಾಗ ಯುವತಿ ಬಾಗಿಲು ತೆರೆದಿರಲಿಲ್ಲ.  ಬಾಗಿಲು ಮುರಿದು ಒಳಪ್ರವೇಶಿಸಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News