75 ಕೋಟಿ ರೂ.ಮೌಲ್ಯದ ಬಿಡಿಎ ಆಸ್ತಿ ವಶ

Update: 2022-04-12 14:04 GMT

ಬೆಂಗಳೂರು, ಎ.12: ಬಿಡಿಎಗೆ ಸೇರಿದ ಜಾಗದಲ್ಲಿ ಅಕ್ರಮ ಒತ್ತುವರಿಕಾರರಿಂದ ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರಿಸಿರುವ ಬಿಡಿಎ ಮಂಗಳವಾರ ಬಿಟಿಎಂ ಬಡಾವಣೆ ಮತ್ತು ದೇವರಚಿಕ್ಕನಹಳ್ಳಿಯಲ್ಲಿ ಸುಮಾರು 75 ಕೋಟಿ ರೂ.ಅಧಿಕ ಮೌಲ್ಯದ ಎರಡು ಜಾಗಳನ್ನು ವಶಪಡಿಸಿಕೊಂಡಿದೆ. 

ಬಿಡಿಎ ಕಾರ್ಯಪಾಲಕ ಅಭಿಯಂತರ ಸುರೇಶ್ ಮತ್ತು ಕಾರ್ಯಪಡೆ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ನೇತೃತ್ವದಲ್ಲಿ ಬಿಟಿಎಂ ಬಡಾವಣೆಯ 4ನೆ ಹಂತದ 2ನೆ ಬ್ಲಾಕ್‍ನಲ್ಲಿ ಶಾಲಾ ಉದ್ದೇಶಕ್ಕಾಗಿ 23 ಗುಂಟೆ ಜಾಗವನ್ನು ಮೀಸಲಿಟ್ಟ ಜಾಗದಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ತಾತ್ಕಾಲಿಕ ಶೆಡ್‍ಗಳು ಮತ್ತು ಅಂಗಡಿ ಮುಗ್ಗಟ್ಟುಗಳನ್ನು ಆರು ಜೆಸಿಬಿಗಳನ್ನು ಬಳಸಿ ತೆರವುಗೊಳಿಸಲಾಯಿತು. 

ಮತ್ತೊಂದೆಡೆ, ದೇವರಚಿಕ್ಕನಹಳ್ಳಿಯಲ್ಲಿ ಬಿಎಂಟಿಸಿಗೆ ಮಂಜೂರು ಮಾಡಲಾಗಿದ್ದ ಜಾಗದಲ್ಲಿ 10ಕ್ಕೂ ಹೆಚ್ಚು ತಾತ್ಕಾಲಿಕ ಶೆಡ್‍ಗಳು ಮತ್ತು ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸಿ ಸುಮಾರು ಒಂದೂಮುಕ್ಕಾಲು ಎಕರೆ ಜಾಗವನ್ನು ಮರುವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಎರಡೂ ಜಾಗಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 75 ಕೋಟಿ ರೂ.ಎಂದು ಅಂದಾಜಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News