ಮುಂದಿನ ನಾಲ್ಕೈದು ವರ್ಷಗಳಲ್ಲಿ ಡ್ರೋನ್ ಸೇವಾ ವಲಯದಲ್ಲಿ 1 ಲಕ್ಷ ಉದ್ಯೋಗ: ಜ್ಯೋತಿರಾದಿತ್ಯ ಸಿಂದಿಯಾ

Update: 2022-04-22 16:41 GMT

ಹೊಸದಿಲ್ಲಿ, ಎ. 22: ಡ್ರೋನ್ ಸೇವಾ ವಲಯ ಅಗಾಧವಾದ ಭರವಸೆ ಮೂಡಿಸಿದೆ. ಇದು ಮುಂದಿನ ನಾಲ್ಕೈದು ವರ್ಷಗಳಲ್ಲಿ 1 ಲಕ್ಷ ಉದ್ಯೋಗಗಳನ್ನು ಒದಗಿಸಲಿದೆ ಎಂದು ನಾಗರಿಕ ವಾಯು ಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಶುಕ್ರವಾರ ಹೇಳಿದ್ದಾರೆ.

ಡ್ರೋನ್ ವಲಯದಲ್ಲಿ ಉತ್ಪಾದಕತೆ ಸಂಬಂಧ ಹೊಂದಿದ ಯೋಜನೆಯನ್ನು ನಾವು ಎದುರು ನೋಡುತ್ತಿದ್ದೇವೆ. ಒಟ್ಟು 60 ಕೋಟಿ ರೂಪಾಯಿ ಆದಾಯ ತರುವ ಡ್ರೋನ್ ವಲಯಕ್ಕೆ ಮುಂದಿನ 3 ವರ್ಷಗಳಲ್ಲಿ 120 ಕೋಟಿ ರೂಪಾಯಿ ಉತ್ತೇಜಕಗಳನ್ನು ನೀಡಲಿದ್ದೇವೆ ಎಂದು ಇಂಡೊ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (ಐಎಸಿಸಿ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಹೇಳಿದರು.

ಡ್ರೋನ್ ಉತ್ಪಾದನಾ ವಲಯದಲ್ಲಿ ಸರಿಸುಮಾರು 5,000 ಕೋಟಿ ರೂಪಾಯಿ ಹೂಡಿಕೆ ವಿಸ್ತರಿಸಲು ನಾವು ಎದುರು ನೋಡುತ್ತಿದ್ದೇವೆ. ಅಲ್ಲದೆ, ಈ ವಲಯ ಮುಂದಿನ ನಾಲ್ಕೈದು ವರ್ಷಗಳಲ್ಲಿ 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಅವರು ಹೇಳಿದರು. ಉತ್ಪಾದನೆ ಸಂಬಂಧ ಹೊಂದಿದ ಉತ್ತೇಜಕ ಯೋಜನೆಯಲ್ಲಿ ಫಲಾನುಭವಿಗಳಾಗಿ ಆಯ್ಕೆ ಮಾಡಲಾದ 14 ಡ್ರೋನ್ ಕಂಪೆನಿಗಳ ಹೆಸನ್ನು ಸಚಿವಾಲಯ ಬಿಡುಗಡೆಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News