ಕ್ಲಾರೆನ್ಸ್ ಶಾಲೆಯಲ್ಲಿ ಮುಂದಿನ ವರ್ಷದಿಂದ ಕ್ರಿಶ್ಚಿಯನ್ ಮಕ್ಕಳಿಗಷ್ಟೇ ದಾಖಲಾತಿಗೆ ಚಿಂತನೆ: ಪೀಟರ್ ಮಚಾದೊ

Update: 2022-04-30 10:58 GMT

ಬೆಂಗಳೂರು: ವಿದ್ಯಾರ್ಥಿಗಳಿಗೆ ಬೈಬಲ್ ಕಡ್ಡಾಯಗೊಳಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ನಗರದ ರಿಚರ್ಡ್ ಕ್ಲಾರೆನ್ಸ್ ಪ್ರೌಢ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ  ಇತರ ಧರ್ಮೀಯ ಮಕ್ಕಳಿಗೆ ದಾಖಲಾತಿ ಇಲ್ಲ, ಕ್ರಿಶ್ಚನ್ ಧರ್ಮದ ಮಕ್ಕಳಿಗೆ ಮಾತ್ರ ಪ್ರವೇಶ ನೀಡುವ ಬಗ್ಗೆ ಆಡಳಿತ ಮಂಡಳಿ ನಿರ್ಧರಿಸಲಿದೆ ಎಂದು ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾದೊ ತಿಳಿಸಿದ್ದಾರೆ. 

ಇತ್ತೀಚೆಗಷ್ಟೇ ಕ್ಲಾರೆನ್ಸ್  ಶಾಲೆಯಲ್ಲಿ ಬೈಬಲ್ ಕಲಿಯುವುದನ್ನು ಕಡ್ಡಾಯಗೊಳಿಸಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಶಾಲೆಗೆ ನೋಟಿಸ್ ನೀಡಲಾಗಿತ್ತು.

ಇದೀಗ ಮುಂದಿನ ವರ್ಷದಿಂದ ಕ್ರಿಶ್ಚಿಯನ್ ಮಕ್ಕಳಿಗೆ ಮಾತ್ರ ಪ್ರವೇಶ ನೀಡಿ, ಇತರ ಧರ್ಮೀಯ ಮಕ್ಕಳಿಗೆ ಪ್ರವೇಶ ನೀಡದಂತೆ ಶಾಲಾ ಆಡಳಿತ ಮಂಡಳಿ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News