ಬೆಂಗಳೂರು | ಕತ್ತು ಹಿಸುಕಿ ಪತ್ನಿಯ ಕೊಲೆ; ಆರೋಪ

Update: 2022-05-05 11:35 GMT

ಬೆಂಗಳೂರು, ಮೇ 5: ಕ್ಷುಲ್ಲಕ ವಿಚಾರಕ್ಕೆ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ದಾಸ್ ಪೇಟೆಯಲ್ಲಿರುವ ಅನ್ನಪೂರ್ಣೇಶ್ವರಿ ಲೇಔಟ್‍ನಲ್ಲಿ ನಡೆದಿದೆ. 

ತುಮಕೂರು ಜಿಲ್ಲೆ ನಂದಿಹಳ್ಳಿ ಮೂಲದ ವನಿತಾ(25) ಮೃತ ದುರ್ದೈವಿಯಾಗಿದ್ದು, ಆಕೆಯನ್ನು ಪತಿಯೇ ಕ್ಷುಲ್ಲಕ ವಿಚಾರಕ್ಕೆ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

ವನಿತಾ ಹಾಗೂ ರಾಮು ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ವನಿತಾಗೆ ಪತಿ ರಾಮು ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಾಮುನನ್ನು ಪೊಲೀಸರು ಬಂಧಿಸಿದ್ದಾರೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News