ಮ.ಪ್ರ.: ಮದುವೆ ಕಾರ್ಯಕ್ರಮದಲ್ಲಿ ಬಾಲಕಿಯ ಅಪಹರಿಸಿ ಅತ್ಯಾಚಾರ, ಹತ್ಯೆ

Update: 2022-05-05 17:21 GMT

ನರಸಿಂಗಪುರ,ಮೇ 5 ವಿವಾಹ ಸಮಾರಂಭವೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಅಪಹರಿಸಿದ ಬಳಿಕ ಆಕೆಯನ್ನು ಅತ್ಯಾಚಾರಗೈದು ಕೊಲೆಗೈದ ಆಘಾತಕಾರಿ ಘಟನೆ ಮಧ್ಯಪ್ರದೇಶದ ನರಸಿಂಗಪುರ ಪಟ್ಟಣದಲ್ಲಿ ಗುರುವಾರ ವರದಿಯಾಗಿದೆ.

   ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಬಾಲಕಿಯನ್ನು ಹತ್ಯೆಗೈದ ಬಳಿಕ ಆಕೆಯ ಶವವನ್ನು ಹೊಲವೊಂದರಲ್ಲಿ ಹೂತುಹಾಕಿದ್ದನು. ಆರೋಪಿಯ ತೋರಿಸಿದ ಜಾಗದಲ್ಲಿ ಪೊಲೀಸರು ಬಾಲಕಿಯ ಮೃತದೇಹವನ್ನು ಪತ್ತೆಹಚ್ಚಿದ್ದಾರೆ.

 ತಮ್ಮ ಪುತ್ರಿಯನ್ನು ಅಪಹರಿಸಿರುವ ಬಗ್ಗೆ ಆಕೆಯ ಪಾಲಕರು ಬುಧವಾರ ರಾತ್ರಿ ದೂರು ನೀಡಿದ್ದರು. ತಮ್ಮ ಕೆಲಸದಾಳುವೇ ಬಾಲಕಿಯನ್ನು ಅಪಹರಿಸಿದ್ದಾನೆಂದು ಆರೋಪಿಸಿದ್ದಾರೆಂದು ಗಂಜ್ ಪೊಲೀಸ್ ಠಾಣಾಧಿಕಾರಿ ಗೌರವ್ ಚಾಥ್ ತಿಳಿಸಿದ್ದಾರೆ.

 ಆರೋಪಿಯನ್ನು ಬಂಧಿಸಲಾಗಿದ್ದು ಹಾಗೂ ಪ್ರಕರಣದ ತನಿಖೆಯನ್ನು ಮುಂದುವರಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಹತ್ಯೆಗೈದಿರುವುದಾಗಿ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ. ಆತ ನೀಡಿದ ಸೂಚನೆಯಂತೆ ಬಾಲಕಿಯ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ’’ ಎಂದು ಗೌರವ್ ಚಾತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News