ಸಂದರ್ಶಕರ ಪ್ರವೇಶಕ್ಕೆ ತಡೆವೊಡ್ಡಿದ ಕಾರಣ; ಇನ್‍ಸ್ಪೆಕ್ಟರ್ ಅಮಾನತುಗೊಳಿಸಲು ಡಿಜಿಪಿ ಮನವಿ

Update: 2022-05-12 14:07 GMT
 ಡಿಜಿಪಿ ಡಾ.ರವೀಂದ್ರನಾಥ್

ಬೆಂಗಳೂರು, ಮೇ 12: ತಮ್ಮನ್ನು ಭೇಟಿ ಮಾಡಲು ಆಗಮಿಸಿದ ವ್ಯಕ್ತಿಗಳಿಗೆ ಪ್ರವೇಶ ದ್ವಾರದಲ್ಲೇ ತಡೆವೊಡ್ಡಿದ ಕಾರಣ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಶಿವಸ್ವಾಮಿಯನ್ನು ಅಮಾನತು ಮಾಡುವಂತೆ ರಾಜೀನಾಮೆ ಸಲ್ಲಿಸಿರುವ ಡಿಜಿಪಿ ಡಾ.ರವೀಂದ್ರನಾಥ್ ಮನವಿ ಮಾಡಿದರು.

ಗುರುವಾರ ಇಲ್ಲಿನ ಸಿಐಡಿ ಆವರಣದಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯ್ ನೇತೃತ್ವದಲ್ಲಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಡಿಜಿಪಿ ಡಾ.ರವೀಂದ್ರನಾಥ್ ಅವರ ಭೇಟಿಗೆ ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಹೈಗ್ರೌಂಡ್ಸ್ ಠಾಣಾ ಇನ್‍ಸ್ಪೆಕ್ಟರ್ ಶಿವಸ್ವಾಮಿ ತಡೆವೊಡ್ಡಿದರು. ಇದನ್ನು ಅರಿತ ಡಾ.ರವೀಂದ್ರನಾಥ್ ನೇರವಾಗಿ ಸ್ಥಳಕ್ಕೆ ಆಗಮಿಸಿ ಇನ್‍ಸ್ಪೆಕ್ಟರ್ ನಡೆಗೆ ಗರಂ ಆದ ಪ್ರಸಂಗ ಜರುಗಿತು.

ಬಳಿಕ ಮೊಬೈಲ್ ಕರೆ ಮೂಲಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಸಂಪರ್ಕಿಸಿದ ಅವರು, ನನ್ನನ್ನ ಭೇಟಿಯಾಗಲು ಬಂದವರನ್ನು ಈ ಶಿವಸ್ವಾಮಿ ಒಳಗೆ ಬಿಟ್ಟಿಲ್ಲ. ಈತನನ್ನು ಅಮಾನತು ಮಾಡಿ, ಇದು ನನ್ನ ಮನವಿ ಎಂದರು.

ಅಲ್ಲದೆ, ನನ್ನ ಭೇಟಿಗೆ ಸಾರ್ವಜನಿಕರು ಬರುವುದು ಸಾಂವಿಧಾನಿಕ ಹಕ್ಕು. ಅದನ್ನು ಯಾರು ತಡೆಯುವಂತಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News