ಬಿಬಿಎಂಪಿ ಕಸದ ಲಾರಿಗಳ ವಿರುದ್ಧ ಕ್ರಮಕ್ಕೆ ಶಾಸಕ ರಿಝ್ವಾನ್ ಆಗ್ರಹ

Update: 2022-05-15 15:59 GMT

ಬೆಂಗಳೂರು, ಮೇ 15: ಬೆಂಗಳೂರಿನಲ್ಲಿ ಬಿಬಿಎಂಪಿ ಕಸದ ಲಾರಿಗಳಿಂದ ಉಂಟಾಗುತ್ತಿರುವ ಅನಾಹುತಗಳ ವಿರುದ್ಧ ಸೂಕ್ತ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಕಾಂಗ್ರೆಸ್ ಶಾಸಕ ರಿಝ್ವಾನ್ ಆರ್ಶದ್ ಒತ್ತಾಯಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ನಾಲ್ಕೈದು ನಾಗರೀಕರು ಬಿಬಿಎಂಪಿ ಕಸದ ಲಾರಿಗಳಿಂದ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.ಆದರೂ, ಬಿಬಿಎಂಪಿ, ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೇ. 14ರಂದು ಮತ್ತೇ ಕಸದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಕಾರ್ಮಿಕನೋರ್ವ ಪ್ರಾಣ ಕಳೆದುಕೊಂಡಿದ್ದಾನೆ.ಇಂತಹ ಗಂಭೀರ ಪ್ರಕರಣಗಳು ವರದಿಯಾಗುತ್ತಿದ್ದರೂ, ಇದುವರೆಗೂ ಕಠಿಣ ಜರುಗಿಸಿಲ್ಲ. ಅಲ್ಲದೆ, ಈಗಲಾದರೂ, ಬಿಬಿಎಂಪಿಯು ಎಲ್ಲ ಗುತ್ತಿಗೆದಾರರನ್ನು ಕರೆದು ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಬೇಕು ಒತ್ತಾಯಿಸಿದರು.

ಪ್ರತಿದಿನ ಲಾರಿ ವಾಹನ, ಚಾಲಕರ ತಪಾಸಣೆ ನಡೆಸಬೇಕು. ಯಾವುದೇ ಅನಾಹುತ ನಡೆದರೂ, ಲಾರಿ ಮಾಲಕರೇ ಪರಹಾರ ನೀಡಬೇಕು. ಜತೆಗೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News