ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

Update: 2022-05-17 16:30 GMT

ಮಲ್ಪೆ : ಮೀನುಗಾರಿಕೆ ಬೋಟಿನಿಂದ ಅಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾುಗಿದೆ.

ಮೃತರನ್ನು ಭಟ್ಕಳ ಕಿತ್ರೆ ಗ್ರಾಮದ ಮಾರುಕೆರೆಯ ಚಂದ್ರು ಗೊಂಡ (42) ಎಂದು ಗುರುತಿಸಲಾಗಿದೆ. ಇವರು ಮೇ ೧೫ರಂದು ರಾತ್ರಿ ಮಲ್ಪೆ ಸಮುದ್ರದಲ್ಲಿ ಮೀನುಗಾರಿಕೆ ಬೋಟ್‌ನಲ್ಲಿ ಕೆಲಸ ಮಾಡಿಕೊಂಡಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿ ದ್ದರು. ಹುಡುಕಾಡಿದಾಗ ಇವರ ಮೃತದೇಹ ಮೇ ೧೭ರಂದು ಬೆಳಗಿನ ಜಾವ ಮಲ್ಪೆ ಲೈಟ್ ಹೌಸ್ ಬಳಿ ದೊರೆತಿದೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News