ಕಾನ್‌ ಚಲನಚಿತ್ರೋತ್ಸವದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರವನ್ನು ಶ್ಲಾಘಿಸಿದ ನಟ ಆರ್ .ಮಾಧವನ್

Update: 2022-05-20 15:40 GMT

ಹೊಸದಿಲ್ಲಿ,ಮೇ 20: ಭಾರತವನ್ನು ಪ್ರತಿನಿಧಿಸುವ ತಂಡದೊಂದಿಗೆ 75ನೇ ಕಾನ್ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿರುವ ನಟ ಆರ್.ಮಾಧವನ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಡಿ ‘ಕಿರು ಆರ್ಥಿಕತೆ ’ಯ ಯಶಸ್ಸನ್ನು ಪ್ರಶಂಸಿಸಿದ್ದಾರೆ.

‌ಸ್ಮಾರ್ಟ್ ಫೋನ್ ಅನ್ನು ಹೇಗೆ ಬಳಸಬೇಕು ಅಥವಾ ತಮ್ಮ ಲೆಕ್ಕಪತ್ರಗಳನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ರೈತರಿಗೆ ತಿಳಿಯದಿರಬಹುದಾದ ದೇಶದಲ್ಲಿ ಡಿಜಿಟಲೀಕರಣವು ದೊಡ್ಡ ವಿಪತ್ತು ಆಗಲಿದೆ ಎಂದು ನಂಬಿದ್ದ ಜಗತ್ತು ಮೊದಮೊದಲು ಸಂದೇಹವನ್ನು ವ್ಯಕ್ತಪಡಿಸಿತ್ತು, ಆದರೆ ಎರಡೇ ವರ್ಷಗಳಲ್ಲಿ ಇಡೀ ಕಥೆಯೇ ಬದಲಾಗಿತ್ತು ಮತ್ತು ಕಿರು ಆರ್ಥಿಕತೆಯ ಬೃಹತ್ ಬಳಕೆದಾರರಲ್ಲಿ ಭಾರತವೂ ಒಂದಾಗಿತ್ತು. ತಮಗೆ ಹಣ ಬಂದಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಫೋನ್ ಬಳಕೆಯ ಬಗ್ಗೆ ಶಿಕ್ಷಣ ರೈತರಿಗೆ ಅಗತ್ಯವಿರಲಿಲ್ಲ ಮತ್ತು ಇದು ಅದ್ಭುತ ಸಾಧನೆಗೆ ಕಾರಣವಾಗಿತ್ತು ಎಂದು ಹೇಳಿರುವ ಮಾಧವನ್, ಇದು ನವಭಾರತವಾಗಿದೆ ಎಂದು ಬಣ್ಣಿಸಿದ್ದಾರೆ.

ಮಾಧವನ್ ಹೇಳಿಕೆಯ ವೀಡಿಯೊ ತುಣುಕನ್ನು ಕಾನ್‌ ನಲ್ಲಿ ಭಾರತೀಯ ನಿಯೋಗದ ನೇತೃತ್ವವನ್ನು ವಹಿಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಶೇರ್ ಮಾಡಿಕೊಂಡಿದ್ದಾರೆ. ಮಾಧವನ್ ಬಹುಶಃ ಸರಕಾರದ ನೇರ ಸೌಲಭ್ಯ ವರ್ಗಾವಣೆ ಯೋಜನೆಯನ್ನು ಪ್ರಸ್ತಾಪಿಸಿ ಈ ಮಾತುಗಳನ್ನು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News