​ಕಿನ್ಯ: ಕೂಟು ಝಿಯಾರತ್ ಸಮಾರೋಪ

Update: 2022-05-20 11:54 GMT

ಉಳ್ಳಾಲ: ಪ್ರಾರ್ಥನೆಗೆ ಪ್ರತಿಫಲ ಸಿಗುವ ಬಹಳಷ್ಟು ಸ್ಥಳಗಳು ಇವೆ.ಅಂತಹ ವೇದಿಕೆ ಅಥವಾ ಸ್ಥಳಗಳಲ್ಲಿ ನಾವು ಪ್ರಾರ್ಥನೆ ನಡೆಸಬೇಕಾಗಿದೆ ಎಂದು ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಮಾಜಿ ಮುದರ್ರಿಸ್ ಪತ್ತಾಹ್ ಫೈಝಿ ಹೇಳಿದರು.

ಅವರು ಹಝ್ರತ್ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ (ಖ.ಸಿ.) ಕಿನ್ಯ ಇದರ ಆಶ್ರಯದಲ್ಲಿ ನಡೆಯುವ ಕೂಟು ಝಿಯಾರತ್ ಕಾರ್ಯಕ್ರಮ ದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಶಾಸಕ ಯುಟಿ ಖಾದರ್ ಮಾತನಾಡಿ, ಕೂಟು ಝಿಯಾರತ್ ಗೆ ಗೌರವ ಇದೆ. ಇದನ್ನು ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಆಡಳಿತ ಸಮಿತಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ನಾನು ಶಾಸಕ ನಾಗುವ ಮೊದಲೇ ಕಿನ್ಯ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಅಭಿವೃದ್ಧಿ ನಮ್ಮ ಜವಾಬ್ದಾರಿಯುತ ಕೆಲಸ. ಅದನ್ನು ಇನ್ನೂ ಕೂಡ ಕಿನ್ಯ ಗ್ರಾಮದಲ್ಲಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ  ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಅಧೀನದಲ್ಲಿ ಆರಂಭ ಗೊಂಡ ಶರೀಯತ್ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ  ಅಲೇಕಳ ಮದನಿ ಪಿ.ಯು.ಕಾಲೇಜು ಪ್ರಾಂಶುಪಾಲ ರಾದ ಇಸ್ಮಾಯಿಲ್ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ದಲ್ಲಿ ರಶೀದ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಬ್ದುಲ್ ಅಕ್ರಮ್ ಬಾಖವಿ, ಸೆಯ್ಯದ್ ಇಬ್ರಾಹಿಂ ಬಾತಿಷ್ ತಂಙಳ್, ಅಮೀರ್ ತಂಙಳ್, ಅಬ್ದುಲ್ ಮಜೀದ್ ದಾರಿಮಿ, ನೌಫಲ್ ಫೈಝಿ ಪಡುವಳ್ಳಿ, ಫಾರೂಕ್ ದಾರಿಮಿ ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ, ಕೋಶಾಧಿಕಾರಿ ಬಾವಾ ಹಾಜಿ, ಉಪಾಧ್ಯಕ್ಷ ಇಬ್ರಾಹಿಂ , ಕುಂಞಿ ಹಾಜಿ, ಮಾರಾಠಿಮೂಲೆ ಅಶ್ರಫ್, ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಸಾಗ್, ಹಮೀದ್ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News