ಹಿದಾಯ ವಿಶೇಷ ಮಕ್ಕಳ ಶಾಲೆಗೆ ಉಚಿತ ಶಾಲಾ ವಾಹನ ಹಸ್ತಾಂತರ

Update: 2022-05-26 10:03 GMT

ಮಂಗಳೂರು : ವಿಶೇಷ ಚೇತನ ಮಕ್ಕಳಿಗೆ ಅವಕಾಶ ಮತ್ತು ಸೂಕ್ತ ತರಬೇತಿಯನ್ನು ನೀಡಿದಾಗ ಅಸಾಮಾನ್ಯ  ಸಾಧನೆ ಮಾಡಬಲ್ಲರು ಎಂದು ಹಿದಾಯ ಫೌಂಡೇಶನ್ ಟ್ರಸ್ಟ್ ನ ಚೆಯರ್‌ಮ್ಯಾನ್ ಮನ್ಸೂರ್ ಅಹ್ಮದ್ ಆಝಾದ್ ಅಭಿಪ್ರಾಯಪಟ್ಟರು.

ಅವರು ಕಾವಳಕಟ್ಟೆಯ ಹಿದಾಯ ವಿಶೇಷ ಮಕ್ಕಳ ಶಾಲೆಗೆ ನಾಟೆಕಲ್ ಕುನಿಲ್ ಇಲ್ಮ್ ಅಕಾಡಮಿ ಇವರು ಉಚಿತವಾಗಿ ನೀಡಿದ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದರು.

ಪ್ರತಿಯೊಂದು ಮಗುವೂ ಕೂಡಾ ವಿಶಿಷ್ಟ ಮತ್ತು ಅನನ್ಯವಾಗಿಯೇ ಹುಟ್ಟುತ್ತದೆ ಆದರೆ ಪರಿಸರದಿಂದ ಸ್ಫೂರ್ತಿ ಪಡೆದ ಮಗು ಸಾಧಕನಾಗಬಲ್ಲುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಕುನಿಲ್ ಇಲ್ಮ್ ಅಕಾಡಮಿಯ ಅಧ್ಯಕ್ಷ ಫಕ್ರುದ್ದೀನ್, ಉಪಾಧ್ಯಕ್ಷ ಮೊಯ್ದಿನ್ ಕುಂಞಿ, ಕೋಶಾಧಿಕಾರಿ ಆದಿಲ್ ಸೂಫಿ, ಹಿದಾಯ ಫೌಂಡೇಶನ್ ಆಡಳಿತಾಧಿಕಾರಿ ಆಬಿದ್ ಅಸ್ಗರ್, ಕೋಶಾಧಿಕಾರಿ ಎಫ್ಎಂ ಬಶೀರ್, ಉಪಾಧ್ಯಕ್ಷ ಆಸಿಫ್ ಇಕ್ಬಾಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಸ್ವಾಗತಿಸಿದರು, ಸದಸ್ಯ ಹಕೀಂ ಕಲಾಯಿ ವಂದಿಸಿದರು. ಕಾರ್ಯದರ್ಶಿ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News