ಬೆಂಗಳೂರು: ಕೆಜಿಎಫ್ ಬಾಬು ನಿವಾಸದ ಮೇಲೆ ಐಟಿ ದಾಳಿ

Update: 2022-05-28 15:53 GMT
 ಕೆಜಿಎಫ್ ಬಾಬು 

ಬೆಂಗಳೂರು, ಮೇ 28: ಕಾಂಗ್ರೆಸ್ ನಾಯಕ, ಉದ್ಯಮಿ ಕೆಜಿಎಫ್ ಬಾಬು ಯಾನೆ ಯುಸೂಫ್ ಶರೀಫ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು ಎಂದು ವರದಿಯಾಗಿದೆ.

ಶನಿವಾರ ಬೆಳಗ್ಗೆ ಇಲ್ಲಿನ ವಸಂತನಗರದ ಅವರ ನಿವಾಸಕ್ಕೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡರು. ಅದೇ ರೀತಿ, ಮೈಸೂರಿನ ಅವರ ಸಹೋದರಿ ನಿವಾಸ ಸೇರಿದಂತೆ ಬಾಬು ಅವರಿಗೆ ಸಂಬಂಧಿಸಿದ 7 ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಆದಾಯ ತೆರಿಗೆಯಲ್ಲಿ ವ್ಯತ್ಯಯ ಕಂಡುಬಂದ ಹಿನ್ನೆಲೆಯಲ್ಲಿ ಇವತ್ತು ಬಾಬು ಅವರ ನಿವಾಸ, ಉಮ್ರಾ ಡೆವಲಪರ್ಸ್ ಕಚೇರಿ, ಹಾಗೂ ರಿಯಲ್ ಎಸ್ಟೇಟ್ ಕಚೇರಿಗಳ ಮೇಲೆ ದಾಳಿ ನಡೆಸಿ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಕಳೆದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ಕೆಜಿಎಫ್ ಬಾಬು, ನಾಮಪತ್ರ ಸಲ್ಲಿಸುವಾಗ 1,741 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು.

ಇದನ್ನೂ ಓದಿ... ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ನಗರ ಕ್ಷೇತ್ರದಲ್ಲಿ  ಕೆಜಿಎಫ್ ಬಾಬುಗೆ ಸೋಲು 

ಇದನ್ನೂ ಓದಿ... ರಾಜ್ಯದ ಅತಿ ಶ್ರೀಮಂತ ರಾಜಕಾರಣಿ ಯಾರು ಗೊತ್ತೇ ?

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News