ಆನೆದಂತ ಸ್ವಾಧೀನ ಪ್ರಕರಣ: ವಿಚಾರಣೆಯೆದುರಿಸಲಿರುವ ನಟ ಮೋಹನ್‌ಲಾಲ್

Update: 2022-06-10 17:12 GMT

ಕೊಚ್ಚಿ, ಜೂ.10: ಎರಡು ಜೊತೆ ಆನೆದಂತಗಳನ್ನು ಅಕ್ರಮವಾಗಿ ಇರಿಸಿಕೊಂಡಿದ್ದ ಆರೋಪದಲ್ಲಿ ಮಲಯಾಳಂನ ಖ್ಯಾತ ಚಲನಚಿತ್ರ ನಟ ಮೋಹನ್‌ಲಾಲ್ ವಿರುದ್ಧ ವನ್ಯಜೀವಿ ಅಪರಾಧ ಕಾಯ್ದೆಯಡಿ ದಾಖಲಿಸಲಾಗಿದ್ದ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕೆಂಬ ಕೇರಳ ಸರಕಾರದ ಮನವಿಯನ್ನು ಇಲ್ಲಿನ ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ. ಇದರಿಂದಾಗಿ ಈ ಪ್ರಕರಣದ ವಿಚಾರಣೆಯನ್ನು ಮೋಹನ್ ಲಾಲ್ ಎದುರಿಸಬೇಕಾಗಿದೆ ಬಂದಿದೆ.

ಪೆರಂಬೂವೂರ್‌ನ ಕೋರ್ಟ್ 3ರ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ರಾಜ್ಯ ಸರಕಾರದ ವಾದವನ್ನು ತಿರಸ್ಕರಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಮುಂದುವರಿಸುವುದು ನಿಷ್ಫಲವಾದ ಪ್ರಯತ್ನವಾಗಿದೆ ಹಾಗೂ ನ್ಯಾಯಾಲಯದ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿದಂತಾಗುತ್ತದೆ ಎಂದು ವಾದಿಸಿತ್ತು.

2012ರಲ್ಲಿ ಮೋಹನ್‌ಲಾಲ್ ಅವರ ನಿವಾಸದ ಮೇಲೆ ನಡೆ ದಾಳಿಯಲ್ಲಿ ಆದಾಯ ತೆರಿಗೆ ಇಲಾಖೆಯು ಅಲ್ಲಿದ್ದ ಅಕ್ರಮ ಆನೆದಂತಗಳನ್ನು ವಶಪಡಿಸಿಕೊಂಡಿತ್ತು ಹಾಗೂ ಅರಣ್ಯ ಇಲಾಖೆಯು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News