ಪ್ರವಾದಿ ನಿಂದನೆ: ನೂಪುರ್ ಶರ್ಮಾರನ್ನು ಸಮರ್ಥಿಸಿದ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್

Update: 2022-06-10 17:50 GMT

ಭೋಪಾಲ್, ಜೂ.21: ಪ್ರವಾದಿ ಮುಹಮ್ಮದ್ ಅವರ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಗಾಗಿ ಅಮಾನತುಗೊಳಿಸಲ್ಪಟ್ಟ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಬಿಜೆಪಿ ಸಂಸದೆ ಪ್ರಜ್ಞಾಠಾಕೂರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಸತ್ಯ ಹೇಳುವುದು ಬಂಡಾಯವೆಂದಾದರೆ, ನಾನು ಕೂಡಾ ಬಂಡಾಯಗಾರ್ತಿ ಎಂದವರ ಟ್ವೀಟಿಸಿದ್ದಾರೆ.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತವು ಹಿಂದೂಗಳಿಗೆ ಸೇರಿದ್ದಾಗಿದೆ ಹಾಗೂ ಸನಾತನ ಧರ್ಮವು ಇಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಳ್ಳಲಿದೆ ಎಂದರು.

ನೂಪುರ್ ಶರ್ಮಾಗೆ ಬಂದಿರುವ ಬೆದರಿಕೆ ಕರೆಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಜ್ಞಾ ಸಿಂಗ್, ‘‘ಈ ಅವಿಶ್ವಾಸಿಗಳು ಯಾವತ್ತೂ ಹೀಗೆ ಮಾಡುತ್ತಿರುತ್ತಾರೆ. ಕಮಲೇಶ್ ತಿವಾರಿ ಏನನ್ನೋ ಹೇಳಿದರೆಂಬ ಕಾರಣಕ್ಕಾಗಿ ಅವರನ್ನು ಹತ್ಯೆಗೈಯಲಾಯಿತು. ಇದೀಗ ನೂಪುರ್ ಶರ್ಮಾ ಏನನ್ನೋ ಹೇಳಿದರೆಂಬ ಕಾರಣಕ್ಕಾಗಿ ಅವರಿಗೂ ಜೀವಬೆದರಿಕೆ ಕರೆಗಳು ಬಂದಿವೆ. ಅವರು ನಮ್ಮ ದೇವರುಗಳು ಹಾಗೂ ದೇವತೆಗಳ ಚಿತ್ರಗಳನ್ನು ವಿರೂಪಗೊಳಿಸಲಾಗಿದೆ. ಅವರದನ್ನು ಹಲವು ವರ್ಷಗಳಿಂದ ಮಾಡುತ್ತಲೇ ಬಂದಿದ್ದಾರೆ. ಅದು ಮಾನಸಿಕತೆಯನ್ನು ತೋರಿಸುತ್ತದೆ ಎಂದವರು ಹೇಳಿದರು.

2019ರ ಅಕ್ಟೋಬರ್ 18ರಂದು ಹಿಂದೂ ಸಮಾಜ ಪಕ್ಷದ ನಾಯಕ ಕಮಲೇಶ್ ತಿವಾರಿಯವರನ್ನು ಲಕ್ನೋದ ಖುರ್ಷಿದಾಭಾಗ್ನ ವಸತಿಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಹತ್ಯೆಗೈಯಲಾಗಿತ್ತು. ಅವರ ದೇಹದ ಮೇಲೆ ಗುಂಡೇಟಿನ ಹಾಗೂ ಇರಿತದ ಗಾಯಗಳು ಕಂಡುಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News