ಎರಡು ಶಾಲೆಯ 31 ಮಕ್ಕಳಲ್ಲಿ ಕೊರೋನ ಸೋಂಕು; ಕೋವಿಡ್ ಮುಂಜಾಗೃತ ಕ್ರಮಗಳನ್ನು ಪಾಲಿಸಲು ಬಿಬಿಎಂಪಿ ಸೂಚನೆ

Update: 2022-06-14 18:29 GMT

ಬೆಂಗಳೂರು, ಜೂ.14: ನಗರದ ಎರಡು ಶಾಲೆಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದ್ದರಿಂದ ಶಾಲೆಗಳಲ್ಲಿ ಸರಕಾರವು ಈ ಹಿಂದೆ ಹೊರಡಿಸಿರುವ ಕೋವಿಡ್ ಮುಂಜಾಗೃತ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಬಿಬಿಎಂಪಿ ಸೂಚನೆ ನೀಡಿದೆ. 

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಮಾತನಾಡಿ, ದಾಸರಹಳ್ಳಿಯ ಎರಡು ಶಾಲೆಗಳಲ್ಲೂ ಬಿಬಿಎಂಪಿ ವತಿಯಿಂದ ಕೋವಿಡ್ ಲಸಿಕೆಯನ್ನು ನೀಡಲಾಗಿತ್ತು. ಆದರೆ ಎರಡು ಶಾಲೆಯ 31 ಮಕ್ಕಳಲ್ಲಿ ಕೊರೋನ ಸೋಂಕು ಪ್ರಕರಣ ಕಂಡುಬಂದಿದೆ. ಹಾಗಾಗಿ ಮುಂಜಾಗೃತ ಕ್ರಮಗಳನ್ನು ಪಾಲಿಸುವಂತೆ ಆಡಳಿತ ಮಂಡಳಿಗೆ ಸೂಚಿಸಿದರು.

ಶಾಲಾ ಆವರಣವನ್ನು ಪ್ರವೇಶಿಸುವ ಮುನ್ನ ಮಕ್ಕಳ ದೈಹಿಕ ತಾಪಮಾನವನ್ನು ಪರಿಶೀಲಿಸಬೇಕು. ಶಾಲೆಗಳಲ್ಲಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರವನ್ನು ಪಾಲಿಸಬೇಕು ಎಂದರು.

ವಲಯವಾರು ನೀರಿನ ಸ್ಯಾಂಪಲ್ ಪಡೆಯಲಾಗುತ್ತಿದ್ದು, 4,205 ಸ್ಥಳಗಳಲ್ಲಿ ಲಾರ್ವ ಪತ್ತೆ ಹಚ್ಚಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಈವರೆಗೆ 41 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಅನಾರೋಗ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಔಷಧಿ ಸಂಪಡಿಸುವ ಕೆಲಸ ಮಾಡಲಾಗುವುದು ಎಂದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News