BBMP ಹೊಸ ವಾರ್ಡ್ ಪಟ್ಟಿ ಪ್ರಕಟ; ಆಕ್ಷೇಪಗಳಿಗೆ 15 ದಿನ ಗಡುವು

Update: 2022-06-23 16:30 GMT

ಬೆಂಗಳೂರು, ಜೂ.23: ಬಹು ದಿನಗಳಿಂದ ಚರ್ಚೆಗೆ ಒಳಗಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಾರ್ಡ್‍ಗಳ ಪುನರ್ ವಿಂಗಡನಾ ವರದಿಯನ್ನು ಸರಕಾರವು ರಾಜ್ಯಪತ್ರದಲ್ಲಿ ಪ್ರಕಟಿಸಿದ್ದು, ನಗರಾಭಿವೃದ್ಧಿ ಇಲಾಖೆಗೆ ಆಕ್ಷೇಪಗಳನ್ನು ಸಲ್ಲಿಸಲು 15 ದಿನಗಳ ಗಡುವು ನೀಡಲಾಗಿದೆ ಎಂದು ತಿಳಿಸಲಾಗಿದೆ. 

2011ರ ಜನಸಂಖ್ಯಾ ಆಧಾರದ ಮೇಲೆ ಬಿಬಿಎಂಪಿ 198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ವಿಂಗಡಿಸಲಾಗಿದೆ. ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್‍ಗಳನ್ನು ವಿಂಗಡಿಸಿ, ಸಾರ್ವಜನಿಕ ಚರ್ಚೆಗೆ ಪ್ರಕಟಿಸಲಾಗಿದೆ. ಹದಿನೈದು ದಿನಗಳ ಬಳಿಕ ಆಕ್ಷೇಪಗಳು ಅಥವಾ ಸಲಹೆಗಳು ಬಂದಲ್ಲಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದೆ. 

ನಗರದ ವಿಧಾನಸಭಾ ಕ್ಷೇತ್ರವಾರು ಆಡಳಿತ ಅನುಕೂಲತೆಗಾಗಿ ವಾರ್ಡ್ ವಿಂಗಡನೆ ಮಾಡಲಾಗಿದೆ. ಯಲಹಂಕ 1, ಕೆ.ಆರ್. ಪುರಂ 4, ಬ್ಯಾಟರಾಯನಪುರ 3, ಯಶವಂತಪುರ 3, ರಾಜರಾಜೇಶ್ವರಿನಗರ 5, ದಾಸರಹಳ್ಳಿ 4, ಮಹಾಲಕ್ಷ್ಮೀ ಲೇಔಟ್ 2, ಸರ್ವಜ್ಞನಗರ 2, ಸಿ.ವಿ. ರಾಮನ್ ನಗರ 2, ಶಿವಾಜಿನಗರ 1, ಗೋವಿಂದರಾಜನಗರ 1, ವಿಜಯನಗರ 1, ಬಸವನಗುಡಿ 1, ಪದ್ಮನಾಭನಗರ 2, ಬಿಟಿಎಂ ಲೇಔಟ್ 1, ಮಹದೇವಪುರ 5, ಬೊಮ್ಮನಹಳ್ಳಿ 14, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 5 ವಾರ್ಡ್‍ಗಳನ್ನು ಹೆಚ್ಚುವರಿಯಾಗಿ ಮಾಡಲಾಗಿದೆ. ಚಾಮರಾಜ ಪೇಟೆ ಮತ್ತು ಜಯನಗರ ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ ಒಂದು ವಾರ್ಡ್ ಅನ್ನು ಕಡಿಮೆ ಮಾಡಲಾಗಿದೆ.

ಹಾಗೆಯೇ http://bmpdelimitation2022.com ನಲ್ಲಿ ಆನ್‍ಲೈನ್ ಮೂಲಕವೂ ಆಕ್ಷೇಪಗಳನ್ನು ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News