ಪಂಜಾಬ್: ತನ್ನ ಗೆಲುವಿನ ಕೀರ್ತಿ ಉಗ್ರವಾದಿಗೆ ಸಲ್ಲಬೇಕು ಎಂದ ಹೊಸ ಸಂಸದ!

Update: 2022-06-27 04:55 GMT
 ಸಿಮ್ರಂಜಿತ್ ಸಿಂಗ್ ಮಾನ್ (Photo: Facebook)

ಚಂಡೀಗಢ: ಲೋಕಸಭಾ ಉಪಚುನಾವಣೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸ್ವಕ್ಷೇತ್ರ ಸಂಗ್ರೂರ್‍ನಲ್ಲಿ ಗೆಲುವು ಸಾಧಿಸಿರುವ ಶಿರೋಮಣಿ ಅಕಾಳಿದಳ (ಅಮೃತಸರ) ಅಭ್ಯರ್ಥಿ ಸಿಮ್ರಂಜಿತ್ ಸಿಂಗ್ ಮಾನ್ ಅವರು ತಮ್ಮ ಗೆಲುವಿನ ಕೀರ್ತಿ ಖಲಿಸ್ತಾನಿ ಉಗ್ರ ಜರ್ನೈಲ್ ಸಿಂಗ್ ಬಿಂದ್ರನ್‍ವಾಲೆ ಅವರಿಗೆ ಸಲ್ಲಬೇಕು ಎಂದು ಹೇಳಿಕೆ ನೀಡಿದ್ದಾರೆ. "ಭಾರತೀಯ ಸೇನೆ ಕಾಶ್ಮೀರದಲ್ಲಿ ನಡೆಸುತ್ತಿರುವ ದೌರ್ಜನ್ಯ"ಗಳ ಬಗ್ಗೆ ಕೂಡಾ ಸಂಸತ್ತಿನಲ್ಲಿ ಧ್ವನಿ ಎತ್ತುವುದಾಗಿ ಅವರು ಘೋಷಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿರುವ ಮಾನ್, "ಬಿಹಾರ ಹಾಗೂ ಛತ್ತೀಸ್‍ಗಢದಲ್ಲಿ ನಕ್ಸಲರ ಹಣೆಪಟ್ಟಿ ಕಟ್ಟಿ ಬುಡಕಟ್ಟು ಜನರನ್ನು ಹತ್ಯೆ ಮಾಡುವ ವಿರುದ್ಧವೂ ಹೋರಾಟ ನಡೆಸುತ್ತೇನೆ" ಎಂದು ಹೇಳಿದ್ದಾರೆ.

ಮಾನ್ ಆಯ್ಕೆ ಬಗ್ಗೆ ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ. "ಸಂಗ್ರೂರಿನಲ್ಲಿ ಇಂದು ಪ್ರಜಾಪ್ರಭುತ್ವ ಸೋತಿದೆ" ಎಂದು ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ. ಪಂಜಾಬ್ ಹಿಂಸೆ ಮತ್ತು ಭಯೋತ್ಪಾದನೆಯ ಕರಾಳತೆಯತ್ತ ಮತ್ತೆ ಸಾಗಬಾರದು ಎಂದು ಅವರು ಹೇಳಿದ್ದಾರೆ. ಸಂಗ್ರೂರ್‍ನ ಫಲಿತಾಂಶ ಇಡೀ ಪಂಜಾಬ್‍ನ ಎಲ್ಲರಿಗೆ ಎಚ್ಚರಿಕೆ ಸಂದೇಶ ಎಂದು ಮತ್ತೊಬ್ಬ ವಕ್ತಾರ ಜೈವೀರ್ ಶೇರ್‍ಗಿಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News