ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ

Update: 2022-07-02 06:22 GMT

 ಕೊಣಾಜೆ, ಜು.1: ವೈದ್ಯ ವೃತ್ತಿ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದೆ. ವೈದ್ಯರ ನಿಸ್ವಾರ್ಥ ಸೇವೆಯನ್ನು ಸಮಾಜವು ಗುರುತಿಸಬೇಕು ಎಂದು ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಯು.ಕೆ.ಮೋನು ಹೇಳಿದ್ದಾರೆ.

 ಅವರು ವೈದ್ಯರ ದಿನಾಚರಣೆ ಪ್ರಯುಕ್ತ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಡಾ.ಗೋಪಾಲ್ ಆಚಾರ್ ಮಂಚಿ ಯವರನ್ನು ಸನ್ಮಾನಿಸಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಗೋಪಾಲ್ ಆಚಾರ್, ವೈದ್ಯ ರಾಗುವುದು ಆರ್ಥಿಕ ಲಾಭಕ್ಕೋಸ್ಕರ ಎಂಬ ದೃಷ್ಟಿಕೋನದಿಂದ ಹೊರ ಬಂದು ಸೇವೆಯಲ್ಲಿಯೇ ನಾವು ದೇವರನ್ನು ಕಾಣಬೇಕು ಎಂದರು.

 ಆಸ್ಪತ್ರೆಯ ವೈಸ್ ಡೀನ್ ಕರ್ನಲ್ ಡಾ.ಎ.ಜಿ.ಕಿರಣ್ ಉಪಸ್ಥಿತರಿದ್ದರು. ಡೀನ್ ಡಾ.ವಿರೂಪಾಕ್ಷ ಸ್ವಾಗತಿಸಿದರು. ಮೆಡಿಕಲ್ ಸುಪರಿಂಟೆಂಡೆಂಟ್ ಡಾ.ಹರೀಶ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಚೀಫ್ ಮೆಡಿಕಲ್ ಆಫೀಸರ್ ಡಾ.ರೋಹನ್ ಮೋನಿಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News