ತೆಲಂಗಾಣ: ಇಂದು ಟಿಆರ್ ಎಸ್ , ಬಿಜೆಪಿಯಿಂದ ಬೃಹತ್ ಶಕ್ತಿ ಪ್ರದರ್ಶನ

Update: 2022-07-02 06:28 GMT
Photo:PTI

ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್ ಇಂದು ಎರಡು ಬೃಹತ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಿದೆ.  ಬಿಜೆಪಿ ತನ್ನ ಎರಡು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನಗರದಲ್ಲಿ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇದರಲ್ಲಿ  ಪಾಲ್ಗೊಳ್ಳಲಿದ್ದಾರೆ.  ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗಿರುವ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಿ ರ್ಯಾಲಿಯನ್ನು ಆಯೋಜಿಸಿದೆ.

ಯಶವಂತ್ ಸಿನ್ಹಾ ಅವರನ್ನು ಟಿಆರ್‌ಎಸ್ ಅಧ್ಯಕ್ಷ ಹಾಗೂ  ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಿದ್ದಾರೆ. ಪ್ರಧಾನಿ ಇದೇ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ.

ಕೆ. ಚಂದ್ರಶೇಖರ್ ರಾವ್ ಹಾಗೂ  ಸಿನ್ಹಾ ಅವರು ನಂತರ ವಿಮಾನ ನಿಲ್ದಾಣದಿಂದ ಜಲ ವಿಹಾರ್‌ಗೆ ಬೈಕ್ ರ್ಯಾಲಿಯನ್ನು ನಡೆಸಲಿದ್ದಾರೆ. ಜಲ್ ವಿಹಾರ್ ನಲ್ಲಿ ಸಿನ್ಹಾ ಅವರ ಉಮೇದುವಾರಿಕೆಯನ್ನು ಬೆಂಬಲಿಸಲು ಸಭೆಯನ್ನು ಆಯೋಜಿಸಲಾಗಿದೆ.

ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಬೆಂಬಲವನ್ನು ಪಡೆಯಲು ಯಶವಂತ್ ಸಿನ್ಹಾ ಅವರು ಎಐಎಂಐಎಂ ಹಾಗೂ  ಕಾಂಗ್ರೆಸ್ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ನಿರ್ಧರಿಸಿದ್ದಾರೆ.

ನಗರದ ರಸ್ತೆಗಳಲ್ಲಿ ಪೋಸ್ಟರ್ ವಾರ್ ಶುರುವಾಗಿದೆ. ಬಿಜೆಪಿಯು ಕೇಂದ್ರದ ಸಾಧನೆಗಳನ್ನು ಬಿಂಬಿಸುವ ಕಟೌಟ್‌ಗಳು ಮತ್ತು ಬ್ಯಾನರ್‌ಗಳನ್ನು ಹಾಕಿದ್ದರೆ, ಟಿಆರ್‌ಎಸ್,  ಕೆಸಿಆರ್ ಮತ್ತು ಯಶವಂತ್ ಸಿನ್ಹಾ ಅವರಿರುವ ಪೋಸ್ಟರ್‌ಗಳನ್ನು ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News