ಕಾಮೆಡ್-ಕೆ ಫಲಿತಾಂಶ: ಬೆಂಗಳೂರು ವಿದ್ಯಾರ್ಥಿಗಳ ಪ್ರಾಬಲ್ಯ

Update: 2022-07-06 02:44 GMT

ಬೆಂಗಳೂರು: ಕಾಮೆಡ್-ಕೆ ಪ್ರವೇಶ ಪರೀಕ್ಷೆ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಬೆಂಗಳೂರಿನ ವಿದ್ಯಾರ್ಥಿಗಳು ಅಗ್ರ 10 ರ‍್ಯಾಂಕ್ಗಳ ಪೈಕಿ ಆರನ್ನು ಗೆದ್ದುಕೊಂಡು ಪ್ರಾಬಲ್ಯ ಸ್ಥಾಪಿಸಿದ್ದಾರೆ.

ಹೊಸೂರಿನ ಎ.ವೆಂಕಟ್ ಹಾಗೂ ಮಾರತ್‍ಹಳ್ಳಿ ಶ್ರೀರಾಮ ಗ್ಲೋಬಲ್ ಸ್ಕೂಲ್‍ನ ಶ್ರೀರಾಮ ಪ್ರಥಮ ರ‍್ಯಾಂಕ್ ಹಂಚಿಕೊಂಡಿದ್ದಾರೆ. ಅಗ್ರ 100 ರ‍್ಯಾಂಕ್ ಗಳ ಪೈಕಿ 52 ಮಂದಿ ಕರ್ನಾಟಕದವರು.

ಬೆಂಗಳೂರಿನ ವಿಶಾಲ್ ಬೈಸಾನಿ (2ನೇ ರ‍್ಯಾಂಕ್), ಅಪೂರ್ವ ಟಂಡನ್ (3), ಸಿದ್ಧಾರ್ಥ ಸಿಂಗ್ (5), ಬೋಯಾ ಹರೇನ್ ಸಾತ್ವಿಕ್ (6) ಮತ್ತು ಆರವ್ ಗಿರಿ (7) ಅಗ್ರಸ್ಥಾನ ಗಳಿಸಿದ ಬೆಂಗಳೂರು ವಿದ್ಯಾರ್ಥಿಗಳು. 90 ರಿಂದ 100 ಪ್ರತಿಶತ ಅಂಕ ಗಳಿಸಿದ 5930 ವಿದ್ಯಾರ್ಥಿಗಳ ಪೈಕಿ ಕರ್ನಾಟಕದ 1768 ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಕಾಮೆಡ್-ಕೆ ಪ್ರಕಟಣೆ ಹೇಳಿದೆ.‌

ಅಗ್ರ-10 ರ‍್ಯಾಂಕ್ ಗಳಿಸಿದ ಇತರ ರಾಜ್ಯಗಳ ವಿದ್ಯಾರ್ಥಿಗಳಲ್ಲಿ ಉತ್ತರ ಪ್ರದೇಶದ ಕನಿಷ್ಕ್ ಶರ್ಮಾ (4), ಗುವಾಹತಿಯ ಸ್ನೇಹಾ ಪ್ರತೀಕ್ (8), ಜೈಪುರದ ವೈಶಾಖ ಅಗರ್‍ವಾಲ್ (9) ಮತ್ತು ಜಾರ್ಖಂಡ್‍ನ ರಂಜನ್ (1) ಸೇರಿದ್ದಾರೆ.

ಕರ್ನಾಟಕದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪದವಿ ತರಗತಿ ಪ್ರವೇಶಕ್ಕೆ ಜೂನ್ 19ರಂದು 154 ನಗರಗಳ 230 ಕೇಂದ್ರಗಳಲ್ಲಿ ಆನ್‍ಲೈನ್ ಪರೀಕ್ಷೆ ನಡೆದಿತ್ತು. ಹೊರ ರಾಜ್ಯಗಳ 36,278 ವಿದ್ಯಾರ್ಥಿಗಳು ಸೇರಿದಂತೆ 57,387 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News