ಉತ್ತರಪ್ರದೇಶ: ತನ್ನ ಮನೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದ ಶಾಸಕಿ, ಆಸ್ಪತ್ರೆಗೆ ದಾಖಲು

Update: 2022-07-07 04:44 GMT
Photo:PTI

ಹೊಸದಿಲ್ಲಿ: ಉತ್ತರ ಪ್ರದೇಶದ ಶಾಸಕಿ ಪಲ್ಲವಿ ಪಟೇಲ್ ಅವರು ಲಕ್ನೋದ ತಮ್ಮ ಮನೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದ ಬಳಿಕ ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಾಸಕಿ  ಮೇದಾಂತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ. ಆಸ್ಪತ್ರೆಯ ಹೇಳಿಕೆ ಪ್ರಕಾರ, ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಪಲ್ಲವಿ ಪಟೇಲ್ ಅವರ ಆರೋಗ್ಯ ಹದಗೆಟ್ಟಿತು ಹಾಗೂ  ಅವರು ಮೂರ್ಛೆ ಹೋದರು.

ಪಲ್ಲವಿಯ ಕುಟುಂಬದ ಪ್ರಕಾರ, ಅವರಿಗೆ ತಲೆತಿರುಗುವಿಕೆ ಕಾಣಿಸಿಕೊಂಡಿತು ಹಾಗೂ  ನಿನ್ನೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಪಲ್ಲವಿಯ ತಲೆಗೆ ಗಾಯಗಳಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

41 ರ ವಯ್ಸಸಿನ  ಪಲ್ಲವಿ ಪಟೇಲ್ ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಿರತು ಕ್ಷೇತ್ರದಿಂದ ಬಿಜೆಪಿ ಹಿರಿಯ ನಾಯಕ ಹಾಗೂ  ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಸೋಲಿಸಿದ್ದರು.

ಪಲ್ಲವಿ ಅವರು ಅಪ್ನಾ ದಳ (ಕಾಮೆರವಾಡಿ) ಪಕ್ಷಕ್ಕೆ ಸೇರಿದವರು ಹಾಗೂ  ಕೇಂದ್ರ ಸಚಿವ ಅನುಪ್ರಿಯಾ ಪಟೇಲ್ ಅವರ ಸಹೋದರಿ.

"ಕೌಶಂಬಿ ಜಿಲ್ಲೆಯ ಸಿರತುವಿನ ಜನಪ್ರಿಯ ಶಾಸಕಿ ಪಲ್ಲವಿ ಪಟೇಲ್ ಜಿ ಬಗ್ಗೆ ನಮಗೆ ಸುದ್ದಿ ಬಂದಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ನಾನು ದೇವರನ್ನು ಪ್ರಾರ್ಥಿಸುತ್ತೇನೆ" ಎಂದು ಪಲ್ಲವಿ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದ ಉಪಮುಖ್ಯಮಂತ್ರಿ ಕೇಶವ್ ಮೌರ್ಯ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News