ಮಹಾರಾಷ್ಟ್ರದ ಹೊಸ ಸಂಪುಟಕ್ಕೆ ಬಿಜೆಪಿಯಿಂದ 25, ಶಿಂಧೆ ತಂಡದಿಂದ 13 ಸಚಿವರು ಸೇರ್ಪಡೆ: ವರದಿ

Update: 2022-07-07 07:57 GMT
Photo:PTI

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತನ್ನ ಸಂಪುಟದಲ್ಲಿ 38 ಸಚಿವರನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದ್ದು, ಪಾಲುದಾರ ಪಕ್ಷ ಬಿಜೆಪಿಯಿಂದ 25 ಸಚಿವರು ಸಂಪುಟ ಸೇರುವ ನಿರೀಕ್ಷೆ ಇದೆ ಎಂದು NDTV ವರದಿ ಮಾಡಿದೆ.

ಹೊಸ ಸಂಪುಟದಲ್ಲಿ ಬಿಜೆಪಿಯಿಂದ 25, ಏಕನಾಥ್ ಶಿಂಧೆ ಅವರ ಶಿವಸೇನೆಯಿಂದ 13 ಸಚಿವರು ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಶಿಂಧೆ ಹಾಗೂ  ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೊರತುಪಡಿಸಿ  ಹೆಚ್ಚಿನ ಮಂತ್ರಿಗಳು ಹೊಸಬರು.

ಮುಂದಿನ ಮಹಾರಾಷ್ಟ್ರ ಚುನಾವಣೆಗೆ ತಯಾರಿ ನಡೆಸುವ ಮುನ್ನ ಹೊಸ ಮುಖಗಳನ್ನು ಪರೀಕ್ಷಿಸಲು ಬಿಜೆಪಿ ಬಯಸಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News