ಬೆಂಗಳೂರು: ಆರೋಗ್ಯ, ಜೀವನ ಕೌಶಲ್ಯ ತರಬೇತಿ ಶಿಬಿರ

Update: 2022-07-07 12:33 GMT

ಬೆಂಗಳೂರು, ಜು. 7: ‘ರೋಟರಿ ಕ್ಲಬ್ ಹಾಗೂ ಯೋಗ ಗಂಗೋತ್ರಿ' ಜಂಟಿ ಆಶ್ರಯದಲ್ಲಿ ಜು.9ರಿಂದ ಎರಡು ದಿನಗಳ ಕಾಲ ತುಮಕೂರಿನ ಸಿದ್ದರಬೆಟ್ಟದ ಪ್ರಕೃತಿ ಮಡಿಲಲ್ಲಿ ಆರೋಗ್ಯ ಮತ್ತು ಜೀವನ ಕೌಶಲ್ಯ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.

ಜು.9 ಮತ್ತು 10ರ ಬೆಳಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಶಿಬಿರ ನಡೆಯಲಿದ್ದು, ಎರಡು ದಿನಗಳ ಊಟ, ವಸತಿ ಸಹಿತ ಪ್ರಾಕೃತಿಕ ಆರೋಗ್ಯ ಶಿಬಿರ ನಡೆಯಲಿದೆ. ಕುಟುಂಬ ಸಮೇತವಾಗಿ ಭಾಗವಹಿಸಿ ಪ್ರಾಕೃತಿಕ ಸ್ವಾಸ್ಥ್ಯ ಜೀವನ ಕೌಶಲಗಳನ್ನು ಕಲಿಯಬಹುದು. ಸೀಮಿತ ಜನರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.

ಆಸಕ್ತರು ಕೂಡಲೇ ನಿಮ್ಮ ವಿವರಗಳನ್ನು ಮೊಬೈಲ್ ವಾಟ್ಸ್‍ಅಪ್ ಸಂಖ್ಯೆಗೆ 88846 46108. 9538955380 ಕಳುಹಿಸಬೇಕು ಎಂದು ಯೋಗ ಗಂಗೋತ್ರಿ ಪ್ರಕಟಣೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News