ಪ್ರಕೃತಿ ವಿಕೋಪ: ಈ ವರ್ಷ ಚೀನಾಕ್ಕೆ13.13 ಬಿಲಿಯನ್ ಡಾಲರ್ ನಷ್ಟು ನಷ್ಟ

Update: 2022-07-21 16:28 GMT

ಬೀಜಿಂಗ್, ಜೂ.21: ಪ್ರಾಕೃತಿಕ ವಿಕೋಪದಿಂದಾಗಿ 2022ರ ಪ್ರಥಮಾರ್ಧದಲ್ಲಿ ಚೀನಾಕ್ಕೆ ಸುಮಾರು 13.13 ಬಿಲಿಯನ್ ಡಾಲರ್ನಷ್ಟು ನೇರ ಆರ್ಥಿಕ ನಷ್ಟವಾಗಿದೆ ಎಂದು ತುರ್ತುನಿರ್ವಹಣಾ ಇಲಾಖೆ ಗುರುವಾರ ಹೇಳಿದೆ. ಜನವರಿಯಿಂದ ಜೂನ್ ವರಗೆ ಪ್ರವಾಹ ಮತ್ತು ಆಲಿಕಲ್ಲು ಮಳೆ ಚೀನಾದಲ್ಲಿ ಸಂಭವಿಸಿದ ಪ್ರಮುಖ ಪ್ರಾಕೃತಿಕ ದುರಂತಗಳಾಗಿದ್ದರೆ, ಘನೀಕರಿಸುವ ಹವಾಮಾನ, ಬರಗಾಲ, ಭೂಕಂಪಗಳು, ಹಿಮ ವಿಪತ್ತುಗಳು ಮತ್ತು ಅರಣ್ಯ ಮತ್ತು ಹುಲ್ಲುಗಾವಲು ಬೆಂಕಿ ಇತರ ಪ್ರಾಕೃತಿಕ ದುರಂತಗಳಾಗಿವೆ ಎಂದು ಇಲಾಖೆಯ ವಕ್ತಾರ ಶೆನ್ ಝಾನ್ಲಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಈ ಅವಧಿಯಲ್ಲಿ ಸುಮಾರು 39.14 ಮಿಲಿಯನ್ ಜನತೆ ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಒಳಗಾಗಿದ್ದು 178 ಮಂದಿ ಮೃತಪಟ್ಟಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಮತ್ತು 1.28 ಮಿಲಿಯನ್ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. 18,000ಕ್ಕೂ ಅಧಿಕ ಮನೆಗಳು ಕುಸಿದಿವೆ ಮತ್ತು 3.62 ಹೆಕ್ಟೇರ್ಗಳಷ್ಟು ಬೆಳೆಭೂಮಿಗೆ ಹಾನಿಯಾಗಿದೆ. ರವಿವಾರ ನೈಋತ್ಯ ಚೀನಾದ ಸಿಚುವಾನ್ ಪ್ರಾಂತದಲ್ಲಿ ಭಾರೀ ಮಳೆಯಿಂದಾಗಿ ಪರ್ವತದಿಂದ ಹರಿದುಬಂದ ಪ್ರವಾಹಕ್ಕೆ ಸಿಲುಕಿ 6 ಮಂದಿ ಮೃತಪಟ್ಟಿದ್ದು 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ಶೆನ್ ಹೇಳಿದ್ದಾರೆ.

ಬೀಚುವಾನ್ ಕ್ವಿಯಾಂಗ್ ಸ್ವಾಯತ್ತ ಪ್ರಾಂತದಲ್ಲಿ ಶುಕ್ರವಾರ ರಾತ್ರಿ 8 ಗಂಟೆಯಿಂದ ಶನಿವಾರ ಬೆಳಗ್ಗೆ 8 ಗಂಟೆಯವರೆಗೆ ನಿರಂತರ ಸುರಿದ ಭಾರೀ ಮಳೆಯಿಂದ 13 ಪಟ್ಟಣಗಳಿಗೆ ಹಾನಿಯಾಗಿದ್ದು 22,300 ಮಂದಿ ತೊಂದರೆಗೆ ಸಿಲುಕಿದ್ದಾರೆ. ಬೈಷಿ ಪಟ್ಟಣದಲ್ಲಿ ಪ್ರವಾಹಕ್ಕೆ ಸಿಲುಕಿ 6 ಮಂದಿ ಮೃತಪಟ್ಟಿದ್ದು 12 ಮಂದಿ ನಾಪತ್ತೆಯಾಗಿದ್ದಾರೆ.

ಇದರಿಂದ ಕೆಲವು ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು ನೆರೆ ನೀರಿನೊಂದಿಗೆ ಕೆಸರು, ಕಸಕಡ್ಡಿ, ಬಂಡೆಕಲ್ಲುಗಳು, ಹೊಯ್ಗೆಗಳು ಜನವಸತಿ ಪ್ರದೇಶಕ್ಕೆ ನುಗ್ಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿಯ ವಿಜ್ಞಾನಿ ಅರ್ನಾಬ್ ಮುಖ್ಯೋಪಾಧ್ಯಾಯ ಅವರು,ಜಿಎಸ್‌ಟಿ ಏರಿಕೆಯಿಂದ ಹೆಚ್ಚಿನ ವೆಚ್ಚವನ್ನು ಸರಿದೂಗಿಸಲು ಅನುದಾನಗಳಲ್ಲಿ ಹೆಚ್ಚಳವನ್ನು ಮಾಡಬೇಕು ಎಂದು ಆಗ್ರಹಿಸಿದರು.

ಈ ನಡುವೆ,ಜಿಎಸ್‌ಟಿ ದರವನ್ನು ಹೆಚ್ಚಿಸಿರುವ ಬಗ್ಗೆ ಅಗತ್ಯಕ್ಕಿಂತಲೂ ಹೆಚ್ಚಿನ ಕಳವಳ ವ್ಯಕ್ತವಾಗುತ್ತಿದೆ ಎಂದು ಕೆಲವು ವಿಜ್ಞಾನಿಗಳು ಭಾವಿಸಿದ್ದಾರೆ.

 ‘ನೂತನ ಜಿಎಸ್‌ಟಿ ದರಗಳು ದೀರ್ಘಾವಧಿಯಲ್ಲಿ ಸಂಶೋಧನೆಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ನಾನು ಭಾವಿಸಿಲ್ಲ. ನಮ್ಮ ಹೆಚ್ಚಿನ ಸಂಶೋಧನಾ ಉಪಕರಣಗಳನ್ನು ಸರಕಾರದ ಹಣದಿಂದ ಖರೀದಿಸಲಾಗುತ್ತದೆ,ಹೀಗಾಗಿ ತೆರಿಗೆಯನ್ನು ಹೆಚ್ಚಿಸಿರುವುದರಿಂದ ಒಂದು ಜೇಬಿನಲ್ಲಿಯ ದುಡ್ಡನ್ನು ತೆಗೆದು ಇನ್ನೊಂದು ಜೇಬಿನಲ್ಲಿ ಇಟ್ಟಂತಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯಂತಹ ಅನುದಾನವನ್ನು ಒದಗಿಸುವ ಏಜೆನ್ಸಿಗಳಿಂದ ಹಣವನ್ನು ಪಡೆಯುವ ಕೆಲವು ಯೋಜನೆಗಳಿವೆ ಮತ್ತು ಈ ಏಜೆನ್ಸಿಗಳು ಹೆಚ್ಚುವರಿ ಹೊರೆಯನ್ನು ಭರಿಸಬೇಕಾಗುತ್ತದೆ,ಆದರೆ ಸಂಶೋಧನೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸಿಲ್ಲ ’ಎಂದು ಹೆಸರು ಹೇಳಿಕೊಳ್ಳಲು ಬಯಸದ ಐಸಿಎಂಆರ್‌ನ ನಿರ್ದೇಶಕರೋರ್ವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News