ಬೆಂಗಳೂರು: ಕಸದ ವಾಹನಗಳ ಮೇಲೆ BBMP ನಾಮಫಲಕ ನಿಷೇಧ

Update: 2022-07-23 13:50 GMT

ಬೆಂಗಳೂರು, ಜು.23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆದಾರರ ಕಾರ್ಯನಿರ್ವಹಣೆ ಮಾಡುತ್ತಿರುವ ಘನತ್ಯಾಜ್ಯ ಸಂಗ್ರಹಣೆ, ಸಾಗಾಣೆ ಮತ್ತು ವಿಲೇವಾರಿಯ ವಾಹನಗಳ ಹಾಗೂ ಪಾಲಿಕೆ ವತಿಯಿಂದ ಕಾರ್ಯನಿರ್ವಹಿಸುವ ಕಾಮಗಾರಿಗಳಿಗೆ ಅವಶ್ಯವಿರುವ ನಿರ್ಮಾಣ ಸಾಮಗ್ರಿಗಳ ಸಾಗಾಣೆ ಮಾಡುವ ವಾಹನಗಳ ಮೇಲೆ “ಪಾಲಿಕೆಯ ಮೂಲಕ ಸೇವೆಯಲ್ಲಿ/ ಬಿಬಿಎಂಪಿ/ಬಿಬಿಎಂಪಿ ಸೇವೆಯಲ್ಲಿ/ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ” ಎಂದು ನಮೂದಿಸಿಕೊಂಡು ಬಿಬಿಎಂಪಿ ಹೆಸರನ್ನು ಅನಧಿಕೃತವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಾಹನಗಳ ಮೇಲೆ ಅನಧಿಕೃತವಾಗಿ ಪಾಲಿಕೆಯ ಹೆಸರನ್ನು ನಮೂದಿಸದಂತೆ ಬಿಬಿಎಂಪಿ ತಿಳಿಸಿದೆ. 

ಇಂತಹ ವಾಹನಗಳ ಅಪಘಾತಗಳಾದಾಗ ‘ಬಿಬಿಎಂಪಿಯ ವಾಹನದಿಂದ ಅಪಘಾತವಾಗುತ್ತಿದೆ’ ಎಂದು ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಪಾಲಿಕೆಯ ಕುರಿತು ತಪ್ಪು ಪರಿಕಲ್ಪನೆ ಮೂಡುತ್ತಿರುತ್ತದೆ. ಹಾಗಾಗಿ ಬಿಬಿಎಂಪಿ ಹೆಸರನ್ನು ವಾಹನಗಳ ಮೇಲೆ ಉಲ್ಲೇಖಿಸುವುದನ್ನು ನಿಷೇಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News