ಬಿಜೆಪಿ ನಮ್ಮ ಪಕ್ಷವನ್ನು ಒಡೆಯಲು ಯತ್ನಿಸುತ್ತಿದೆ: ಸಂಯುಕ್ತ ಜನತಾದಳ ಆರೋಪ

Update: 2022-08-08 07:27 GMT

 ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ಎಲ್ಲಾ ಜನತಾ ದಳ (ಸಂಯುಕ್ತ) ಶಾಸಕರು ಹಾಗೂ  ಸಂಸದರ ಸಭೆಯನ್ನು ಕರೆದಿದ್ದು, ಬಿಜೆಪಿಯೊಂದಿಗಿನ ಅವರ ಹೆಚ್ಚುತ್ತಿರುವ ಸಂಘರ್ಷ ಒಂದು ಹಂತಕ್ಕೆ ತಲುಪಬಹುದು ಎಂಬ ಊಹಾಪೋಹಗಳಿಗೆ ಇದು ಎಡೆಮಾಡಿಕೊಟ್ಟಿದೆ ಎಂದು NDTV ವರದಿ ಮಾಡಿದೆ

ಬಿಜೆಪಿ ನಮ್ಮ ಪಕ್ಷವನ್ನು ಒಡೆಯಲು ಯತ್ನಿಸುತ್ತಿದೆ ಎಂದು ಜೆಡಿಯು ಆರೋಪಿಸಿದ್ದು, ಬಿಹಾರದಲ್ಲಿರುವ ಬಿಜೆಪಿ-ಜೆಡಿಯು ಮೈತ್ರಿಕೂಟ ಪತನದ ಅಂಚಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

 ಜನತಾ ದಳ (ಸಂಯುಕ್ತ) ತಮ್ಮ ಪಕ್ಷದ ಮೇಲಿನ ಮುಖ್ಯಮಂತ್ರಿ ಹಿಡಿತವನ್ನು ದುರ್ಬಲಗೊಳಿಸಲು ಬಿಜೆಪಿ ಎರಡು ಪ್ರಮುಖ ಪಿತೂರಿಗಳನ್ನು ಮಾಡಿದೆ ಎಂದು ನಿತೀಶ್ ಕುಮಾರ್ ಅವರ ಪಕ್ಷ ಆರೋಪಿಸಿದೆ. ಜೆಡಿಯು ಅಧ್ಯಕ್ಷರಾಗಿರುವ ರಾಜೀವ್ ರಂಜನ್ ಸಿಂಗ್  ಅವರು 24 ಗಂಟೆಗಳ ಹಿಂದೆ ಖಂಡನೆ ನಿರ್ಣಯವನ್ನು ಹೊರಡಿಸಿದ್ದಾರೆ.

ಕಳೆದ ವರ್ಷ  ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ  ನಿತೀಶ್ ಕುಮಾರ್ ಅವರ ಮತಗಳು ವಿಭಜನೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ "ಚಿರಾಗ್ ಮಾಡೆಲ್" ಅನ್ನು ನಿಯೋಜಿಸಿತು ಹಾಗೂ  ಇದು ನಮ್ಮ ಪಕ್ಷವು ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ 43 ಸ್ಥಾನಗಳನ್ನು ಗೆಲ್ಲಲು ಕಾರಣವಾಯಿತು ಎಂದು ಲಲನ್ ಸಿಂಗ್ ಹೇಳುತ್ತಾರೆ.

ಇದರರ್ಥ ನಿತೀಶ್ ಕುಮಾರ್ ಅವರನ್ನು ಮೈತ್ರಿಕೂಟದಲ್ಲಿ ಕಿರಿಯ ಪಾಲುದಾರನ ಸ್ಥಾನಮಾನಕ್ಕೆ ಇಳಿಸಲಾಯಿತು.  ಈ ಸ್ಥಾನದೊಂದಿಗೆ ಅವರು ಸಮಾಧಾನ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಸಿಂಗ್ ಹೇಳಿದ್ದಾರೆ.

ನಿತೀಶ್ ಕುಮಾರ್ ಅನಾರೋಗ್ಯದ ಕಾರಣ  ಮುಂದಿಟ್ಟುಕೊಂಡು ದಿಲ್ಲಿಯಲ್ಲಿ ರವಿವಾರ ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಗೆ ಗೈರು ಹಾಜರಾಗಿದ್ದರು. ಈ ಸಭೆಯಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹಿತ 23 ಮುಖ್ಯಮಂತ್ರಿಗಳು ಹಾಜರಾಗಿದ್ದರು. ಈ ಸಭೆಗೆ ಗೈರಾಗುವ ಮೂಲಕ ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ ತನ್ನ ಸಿಟ್ಟನ್ನು ಹೊರ ಹಾಕಿದ್ದಾರೆ.

ಜೆಡಿಯು  ಕಳೆದ ತಿಂಗಳು ತನ್ನ  ಮಾಜಿ ಜೆಡಿಯು ಸಹೋದ್ಯೋಗಿ ಆರ್‌ಸಿಪಿ ಸಿಂಗ್‌ಗೆ ಮತ್ತೊಂದು ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿತ್ತು. ಸಿಂಗ್  ಅವರು ಕಳೆದ ವರ್ಷ ಕುಮಾರ್ ಅವರನ್ನು ಸಂಪರ್ಕಿಸದೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸ್ಥಾನ ಪಡೆದಿದ್ದರು.

"ಸಿಂಗ್ ಅವರು ಕೇಂದ್ರ ಸಂಪುಟ ಸೇರುವ ಅಗತ್ಯವೇನಿತ್ತು? ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇಂದ್ರ ಸಂಪುಟದಲ್ಲಿ ಪಕ್ಷ ಭಾಗಿಯಾಗುವುದಿಲ್ಲ ಎಂದು 2019ರಲ್ಲಿಯೇ ನಿರ್ಧರಿಸಿದ್ದಾರೆ. ಭವಿಷ್ಯದಲ್ಲಿ ಕೂಡಾ ಜೆಡಿಯು ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ'' ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ  ರಾಜೀವ್ ರಂಜನ್ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News